Thursday, August 11, 2022

Latest Posts

ಪ್ರತಿದಿನ ಬೆಳಗ್ಗೆ ಪ್ರಾಣಾಯಾಮ ಮಾಡುತ್ತೀರಾ? ಇದರಲ್ಲಿ ಎಷ್ಟೆಲ್ಲಾ ಲಾಭ ಇದೆ ನೋಡಿ

ಪ್ರತಿನಿತ್ಯ ಜೀವನದ ಜಂಜಾಟದಲ್ಲಿ ಸಿಲುಕಿರುವ ಮನಸ್ಸು ಚಿಂತೆಗೆ ಒಳಗಾಗುತ್ತದೆ. ನಮ್ಮ ಸುತ್ತಲಿನ ಪರಿಸ್ಥಿತಿ, ಜನರ ಮಾತುಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ವೇಳೆ ಮನಸ್ಸನ್ನು ನಿಯಂತ್ರಣದಲ್ಲಿರಿಸಲು ಪ್ರಾಣಾಯಾಮ ಬಹು ಮುಖ್ಯ ಅಂಶವಾಗಿದೆ.. ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ಏನೆಲ್ಲಾ ಲಾಭ ಇದೆ ನೋಡಿ

  • ಶ್ವಾಸಕೋಶದಲ್ಲಿ ತೊಂದರೆಯಾಗದೆ ಕಾರ್ಯನಿರ್ವಹಿಸಲು ಪ್ರಾಣಾಯಾಮ ಮುಖ್ಯವಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ, ಆಸ್ತಮ ಸಮಸ್ಯೆಗಳು ದೂರಾಗುತ್ತದೆ.
  • ಪ್ರಾಣಾಯಾಮದಿಂದ ದೇಹದಲ್ಲಿ ರಕ್ತದ ಪರಿಚಲನೆ ವೃದ್ಧಿಯಾಗಲಿದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
  • ಉಸಿರಾಟದ ಕಡೆ ಗಮನವಹಿಸುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಇದರಿಂದ ಒತ್ತಡ ನಿವಾರಣೆಯಾಗಲಿದೆ.
  • ಮಾನಸೀಕ ಖಿನ್ನತೆಯಿಂದ ಹೊರಬರಲು, ಮನಸ್ಸಿಗೆ ಶಕ್ತಿ ತುಂಬುವಲ್ಲಿ ಪ್ರಾಣಾಯಾಮ ಸಹಕಾರಿಯಾಗಲಿದೆ.
  • ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ಜೀರ್ಣಕ್ರಿಯರ ಸುಧಾರಿಸುತ್ತದೆ ಹಾಗೂ ಹೊಟ್ಟೆಉಬ್ಬರ ಸಮಸ್ಯೆ ಕಡಿಮೆಯಾಗುತ್ತದೆ.
  • ತಲೆ ನೋವು, ಮೃಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರಾಣಾಯಾಮ ಉತ್ತಮ ಆಯ್ಕೆಯಾಗಿದೆ.
  • ದಿನಕ್ಕೆ ಕನಿಷ್ಠ 5 ನಿಮಿಷಗಳ ಕಾಲ ಪ್ರಾಣಾಯಾಮ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss