ಹುಡುಗಿಯರ ಮನಸ್ಸನ್ನು ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ ಅಂತಾರೆ, ಆದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳೋದು ಅಷ್ಟೇನೂ ಕಷ್ಟದ ವಿಷಯ ಅಲ್ಲ. ನಿಮಗೆ ನಾವು ಸಹಾಯ ಮಾಡ್ತೀವಿ ನೋಡಿ..
- ಹುಡುಗಿಗೆ ಹುಡುಗ ಇಷ್ಟ ಆದಾಗ ಮಾತ್ರ ಅವಳು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಾಳೆ.
- ನೀವು ಭಾವುಕರಾಗಿ ಯಾವುದೇ ವಿಷಯ ಹೇಳಿದ್ದರೂ ಅವಳಿಗೆ ಸದಾ ನೆನಪಿರುತ್ತದೆ.
- ಪ್ರತೀ ಹುಡುಗಿಯ ಜೀವನದಲ್ಲೂ ಮರೆಯಲಾರದ ಒಬ್ಬ ಹುಡುಗ ಇದ್ದೇ ಇರ್ತಾನೆ.
- ಮಹಿಳೆಯರಿಗೆ ಹಣೆ ಮೇಲೆ ಮುತ್ತಿಡುವ ಹುಡುಗರು ನಂಬಿಕಸ್ಥ ಎನಿಸುತ್ತಾರೆ.
- ಹುಡುಗಿಯರು ತಮಗಿಷ್ಟದ ಹುಡುಗನ ಬಗ್ಗೆ ಹಗಲುಗನಸು ಕಾಣುತ್ತಾರೆ, ಹೇಳೋದಿಲ್ಲ ಅಷ್ಟೆ.
- ನಿಮ್ಮ ಮೇಲೆ ಅವಳಿಗೆ ಕ್ರಶ್ ಆಗಿದ್ದರೆ, ನಿಮ್ಮ ಬಗ್ಗೆ ಕೆಟ್ಟ ಮಾತುಗಳನ್ನು ಅವಳು ಇಗ್ನೋರ್ ಮಾಡುತ್ತಾಳೆ.
- ನಿಮಗಾಗಿ ಆಕೆ ಸಣ್ಣ ಪುಟ್ಟದ್ದೇ ಆಗಲಿ, ಅಡುಗೆ ಮಾಡಿ ಕೊಡುತ್ತಾಳೆ ಎಂದರೆ ನೀವು ಅವಳಿಗೆ ಇಷ್ಟ ಎಂದರ್ಥ.
- ಹುಡುಗಿಯರಿಗೆ ಮುದ್ದು ಮಾಡಿಸಿಕೊಳ್ಳುವುದು ತುಂಬಾನೇ ಇಷ್ಟ.
- ಹುಡುಗಿಯರಿಗೆ ಸೀಕ್ರೆಟ್ ಇಟ್ಟುಕೊಳ್ಳೋದು ತುಂಬಾ ಕಷ್ಟ.
- ವರ್ಷಕ್ಕೆ 30-64 ಸಲ ಹುಡುಗಿಯರು ಕಣ್ಣೀರು ಹಾಕುತ್ತಾರೆ.
- ಮಹಿಳೆಯರಿಗೆ ಬೇರೆ ಭಾಷೆ ಕಲಿಯೋದು ಸುಲಭ, ಲೆಕ್ಕ ಮಾಡೋದು ಕಷ್ಟ.
- ಮಹಿಳೆಯರು ತಮ್ಮ ಜೀವಿತಾವಧಿಯ ಒಂದು ವರ್ಷವನ್ನು ಯಾವ ಬಟ್ಟೆ ಹಾಕೋದು ಅನ್ನೋದ್ರಲ್ಲೇ ಕಳೆದುಬಿಡ್ತಾರೆ.
- ಮಹಿಳೆಯರು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಾರೆ.