ಕೊಚ್ಚಿ ವಾಟರ್ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭ: ಹೇಗಿದೆ ನೋಡಿ ವ್ಯೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಕೊಚ್ಚಿ ವಾಟರ್ ಮೆಟ್ರೋ ಬುಧವಾರ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬೆಳಗ್ಗೆ 7 ಗಂಟೆಗೆ ಹೈಕೋರ್ಟ್ ವಾಟರ್ ಮೆಟ್ರೋ ಟರ್ಮಿನಲ್ ಮತ್ತು ವೈಪ್ಪಿನ್ ವಾಟರ್ ಮೆಟ್ರೋ ಟರ್ಮಿನಲ್‌ನಿಂದ ಕಾರ್ಯಾಚರಣೆ ಆರಂಭಿಸಿದವು. ಈ ಮಾರ್ಗದ ಟಿಕೆಟ್ ದರ 20 ರೂ. ಪೀಕ್ ಅವರ್‌ಗಳಲ್ಲಿ, ಹೈಕೋರ್ಟ್-ವೈಪಿನ್ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೆ ಬೋಟ್ ಸೇವೆ ಇರುತ್ತದೆ. ರಾತ್ರಿ 8ರವರೆಗೆ ದೋಣಿ ಸೇವೆ ಮುಂದುವರಿಯಲಿದೆ.

ಕೊಚ್ಚಿ ವಾಟರ್ ಮೆಟ್ರೋ ಲಿಮಿಟೆಡ್ (KWML) ನ MD ಲೋಕನಾಥ್ ಬೆಹೆರಾ ಅವರು ವೈಪಿನ್ ವಾಟರ್ ಮೆಟ್ರೋ ಟರ್ಮಿನಲ್‌ನಿಂದ ವೈಪಿನ್ ದ್ವೀಪವಾಸಿಗಳೊಂದಿಗೆ ಮೊದಲ ಮೆಟ್ರೋ ಸೇವೆಯನ್ನು ಪಡೆದರು. ಈ ಸೇವೆ ಜನರಿಗೆ ಪ್ರಯೋಜನಕಾರಿಯಾಗಲಿವೆ ಮತ್ತು ಭವಿಷ್ಯದಲ್ಲಿ ಮೆಟ್ರೋ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಬೆಹೆರಾ ಹೇಳಿದರು.

ಆರಂಭದಲ್ಲಿ 76 ಕಿಲೋಮೀಟರ್‌ಗಳನ್ನು ಕೊಚ್ಚಿ ವಾಟರ್ ಮೆಟ್ರೋ ಕ್ರಮಿಸಲಿದೆ ಎಂದು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್‌ನ ಹಣಕಾಸು ನಿರ್ದೇಶಕಿ ಅನ್ನಪೂರಣಿ ಎಸ್ ಹೇಳಿದ್ದಾರೆ. ವಾಟರ್ ಮೆಟ್ರೋ ಸಾಮಾನ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಂತ ಭಿನ್ನವಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು.

ದೇಶದ ಮೊದಲ ವಾಟರ್ ಮೆಟ್ರೋ ಸೇವೆಯು ಕೊಚ್ಚಿ ಮತ್ತು ಸುತ್ತಮುತ್ತಲಿನ ಜನರಿಗೆ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಸುರಕ್ಷಿತ, ಕೈಗೆಟುಕುವ ಪ್ರಯಾಣವನ್ನು ಒದಗಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!