ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡಗು ಕೊರೋನಾ ಅಪ್‌ಡೇಟ್: ಒಂದೇ ದಿನದಲ್ಲಿ ,691 ಮಂದಿಗೆ ಸೋಂಕು ದೃಢ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಭಾನುವಾರ ಮತ್ತೆ 5 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು,691 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 284, ಸೋಮವಾರಪೇಟೆ ತಾಲೂಕಿನಲ್ಲಿ 198, ವೀರಾಜಪೇಟೆ ತಾಲೂಕಿನಲ್ಲಿ 209 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿರುವುದಾಗಿ ಅವರು ವಿವರಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 16,432ರಷ್ಟಾಗಿದ್ದು,
ಕಳೆದ 24 ಗಂಟೆಗಳ ಅವಧಿಯಲ್ಲಿ 806 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವುದರೊಂದಿಗೆ ಒಟ್ಟು 11,191 ಮಂದಿ ಗುಣಮುಖರಾದಂತಾಗಿದೆ.5,064 ಸಕ್ರಿಯ ಪ್ರಕರಣಗಳಿದ್ದು, ಕಳೆದ 25 ಗಂಟೆಗಳ ಅವಧಿಯಲ್ಲಿ 5 ಮಂದಿ ಸಾವಿಗೀಡಾಗುವುದರೊಂದಿಗೆ ಒಟ್ಟು 177ಮಂದಿ ಸೋಂಕಿಗೆ ಬಲಿಯಾದಂತಾಗಿದೆ‌ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಭಾನುವಾರ ವೀರಾಜಪೇಟೆಯ ಸುಳುಗೋಡು, ಕಾನೂರು ಬಿಟ್ಟಂಬಾರೆ, ಚೀಪೆಕೊಲ್ಲಿ, ತಿತಿಮತಿ ಮರೂರು, ವೀರಾಜಪೇಟೆಯ ಗೋಣಿಕೊಪ್ಪ ರಸ್ತೆ, ಕುಟ್ಟ ನರಿಕಡಿ, ಪಾಲಂಗಾಲ, ಸಿದ್ದಾಪುರ ಸೈಂಟ್ ಆನ್ಸ್ ಶಾಲೆ ಬಳಿ, ಹಳೆ ಸಿದ್ದಾಪುರ ಅಯ್ಯಪ್ಪ ದೇವಸ್ಥಾನ ಬಳಿ, ಕುಟ್ಟ ಪಲ್ಲೇರಿ, ಮಡಿಕೇರಿ ತಾಲೂಕಿನ ಬಿಳಿಗೇರಿ ಸಂಬಾರ ಮಂಡಳಿ ಬಳಿ, ಕಟ್ಟೆಮಾಡು ಸೊಸೈಟಿ ಬಳಿ, ಮೂರ್ನಾಡು ಪಿಡಬ್ಲ್ಯುಡಿ ವಸತಿಗೃಹ, ಚೆಯ್ಯಂಡಾಣೆಯ ಮರಂದೋಡ, ನಾಪೋಕ್ಲು ಪೊಲೀಸ್ ಠಾಣೆ ಬಳಿ, ದೊಡ್ಡಪುಲಿಕೋಟು, ಕುಂಬಳದಾಳು ಸರಕಾರಿ ಶಾಲೆ ಬಳಿ, ಮಡಿಕೇರಿ ವಿದ್ಯಾನಗರ ಹೌಸಿಂಗ್ ಬೋರ್ಡ್, ಕನಕದಾಸ ರಸ್ತೆ, ವಾರ್ತಾಭವನ ಬಳಿ, ಮೇಕೇರಿ ಶಕ್ತಿ ನಗರ, ಮಡಿಕೇರಿ ತಾಲೂಕು ಕಚೇರಿ ಬಳಿ, ಮಡಿಕೇರಿ ಎಂಸಿಪಿಎಂ, ಅಮೃತದರ್ಶನ ಹೊಟೇಲ್ ಬಳಿ,ಕಗ್ಗೋಡ್ಲು ಹೂಕಾಡ್ ಪೈಸಾರಿ,ತಲಕಾವೇರಿ ಉದಯ ಸ್ಪೈಸಸ್ ಬಳಿ, ಕೋಪಟ್ಟಿ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನಗನಹಳ್ಳಿ, ಕೆ.ಆರ್.ಸರ್ಕಲ್, ಕೂಗೆಕೋಡಿ, ಇಗ್ಗೋಡ್ಲು, ಕೂಡ್ಲೂರು ನವಗ್ರಾಮ, ಮಾದಾಪುರ ಜಾರ್ಕೊಲ್ಲಿ, ಸೋಮವಾರಪೇಟೆ ಸರಕಾರಿ ಪ್ರೌಢಶಾಲೆ ಬಳಿ, ಚೌಡ್ಲು ಓಎಲ್ ವಿ ಕಾನ್ವೆಂಟ್,ಕುಶಾಲನಗರ‌ ಬಸವೇಶ್ವರ ಬಡಾವಣೆ 2ನೇ ಹಂತ,ನೇತಾಜಿ ಬಡಾವಣೆ 3ನೇ ಬ್ಲಾಕ್, ಕೂಡ್ಲೂರು ಮಾವಿನತೋಟ, ಮಾದಾಪಟ್ಟಣ ಬಸವೇಶ್ವರ ದೇವಾಲಯ ಬಳಿ, ಹೆಬ್ಬಾಲೆ ಚಿನ್ನೇನಹಳ್ಳಿ, ಕೊಡ್ಲಿಪೇಟೆ ಕಲ್ಲುಮಠಗಳಲ್ಲಿ ಹೊಸದಾಗಿ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 470ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss