Thursday, July 7, 2022

Latest Posts

ಕೊಡಗು| ಒಂದೇ ದಿನ 669 ಕೊರೋನಾ ಪ್ರಕರಣ ಪತ್ತೆ

ಹೊಸ ದಿಗಂತ ವರದಿ, ಕೊಡಗು:

ಕೊಡಗು ಜಿಲ್ಲೆಯಲ್ಲಿ ಗುರುವಾರ ಮತ್ತೆ 669 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 7 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 225 ಸೋಮವಾರಪೇಟೆ ತಾಲೂಕಿನಲ್ಲಿ 255 ವೀರಾಜಪೇಟೆ ತಾಲೂಕಿನಲ್ಲಿ 189 ಹೊಸ ಕೋವಿಡ್ ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 14,482ರಷ್ಟಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ 24ಗಂಟೆಗಳ ಅವಧಿಯಲ್ಲಿ 236 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಇದರೊಂದಿಗೆ ಒಟ್ಟು 9253 ಮಂದಿ ಗುಣಮುಖರಾದಂತಾಗಿದೆ. ಅಲ್ಲದೆ 5077ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 7ಮಂದಿ ಸಾವಿಗೀಡಾಗುವುದರೊಂದಿಗೆ, ಒಟ್ಟು152 ಮಂದಿ ಸಾವಿಗೀಡಾದಂತಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ವೀರಾಜಪೇಟೆಯ ಅರುವತ್ತೊಕ್ಲು ಪಿಹೆಚ್ ಎಸ್ ಕಾಲೋನಿ, ಮೂಕ ಎಸ್ಟೇಟ್, ವೆಸ್ಟ್ ನೆಮ್ಮಲೆ, ಕುಟ್ಟ ಕುರ್ಚಿ,ಬಿ.ಶೆಟ್ಟಿಗೇರಿ, ಹುದಿಕೇರಿ,ಪೊನ್ನಂಪೇಟೆ ಗಣಪತಿ ನಗರ, ಎಂಜಿಲಗೆರೆ, ದೇವರಪುರ‌ ಕನ್ನಂಬಾಡಿ, ಪಾಲಿಬೆಟ್ಟ ಆರೋಗ್ಯ ವಸತಿಗೃಹ, ಮಡಿಕೇರಿ ತಾಲೂಕಿನ ಹಮ್ಮಿಯಾಲ,ಕಕ್ಕಬ್ಬೆ ಕಲರ್ಕಲ್ ಎಸ್ಟೇಟ್, ಬೆಟ್ಟಗೇರಿ,ಹೊದವಾಡ,ಪಾಲೂರು ಅಂಚೆಕಚೇರಿ ಬಳಿ, ಕೊಳಕೇರಿ ಭಗವತಿ ದೇವಸ್ಥಾನ, ಕಕ್ಕುಂದಕಾಡು,ಮೂರ್ನಾಡು ಕಾಲೇಜು ರಸ್ತೆ,ಮರಗೋಡು ಅಯ್ಯಪ್ಪ ಬಡಾವಣೆ,ಮಡಿಕೇರಿ ಜ್ಯೋತಿ ನಗರ, ಚಾಮರಾಜ ಬಂಗಲೆ ಬಳಿ, ಸೋಮವಾರಪೇಟೆ ತಾಲೂಕಿನ ಬಸಿರಗುಪ್ಪೆ, ಬಿಳಿಗೇರಿ ಆರೋಗ್ಯ ಕೇಂದ್ರದ ಬಳಿ, ಶಾಂತಳ್ಳಿ ಬಸವನಕಟ್ಟೆ,ಕೋಟೆಯೂರು, ಆನೆಕಲ್ಲು ರಸ್ತೆ, ಕೃಷಿ ಇಲಾಖೆ ವಸತಿಗೃಹ, ಕೂಡ್ಲೂರು ಲಕ್ಷ್ಮಿ ಸ್ಟೋರ್ ಬಳಿ, ನಿಂಗಪ್ಪ ಬಡಾವಣೆ,ಕೂಡುಮಂಗಳೂರು ಕಿಶೋರಿ ಕೇಂದ್ರ ಬಳಿ, ಇಂದಿರಾ ಬಡಾವಣೆ, ಕುಶಾಲನಗರ ಒಂದನೇ ಬ್ಲಾಕ್, ಮಾದಾಪಟ್ಟಣ ಆರ್ ಕೆ ಲೇಔಟ್, ರಥಬೀದಿಗಳಲ್ಲಿ ಹೊಸದಾಗಿ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 466ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss