Saturday, June 25, 2022

Latest Posts

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ: ಕೊಡಗಿನಲ್ಲಿ ಹರಪಳ್ಳಿ ರವೀಂದ್ರಗೆ ಭರ್ಜರಿ ಜಯ

ಹೊಸದಿಗಂತ ವರದಿ, ಕೊಡಗು:

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನಲ್ಲಿ ಹೆಚ್.ಎಸ್.ರವೀಂದ್ರ (ಹರಪಳ್ಳಿ ರವೀಂದ್ರ) ಭರ್ಜರಿ ಗೆಲುವು ಸಾಧಿಸಿದ್ದಾರೆ.
ನಗರದ ಮೈತ್ರಿ ಸಭಾಂಗಣದಲ್ಲಿ ನಡೆದ ಮತ ಎಣಿಕೆ ಕಾರ್ಯದಲ್ಲಿ ರವೀಂದ್ರ ಅವರು ಪ್ರತಿಸ್ಪರ್ಧಿ ಚೇತನ್ ಅವರ ವಿರುದ್ಧ 5792 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ರವೀಂದ್ರ ಅವರಿಗೆ 9151 ಮತಗಳು, ಚೇತನ್ 3,365 ಮತಗಳು ಲಭಿಸಿವೆ.
ವಿಜಯೋತ್ಸವ: ಹರಪಳ್ಳಿ ರವೀಂದ್ರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರವೀಂದ್ರ ಬೆಂಬಲಿಗರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.
ನಗರದ ವಿವಿಧೆಡೆ ಮೆರವಣಿಗೆ ಮೂಲಕ ತೆರಳಿ, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss