Monday, August 8, 2022

Latest Posts

ಕೊಡಗು| ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ: ನಿರ್ದೇಶಕರಾಗಿ ಇಬ್ಬರು ಅವಿರೋಧ ಆಯ್ಕೆ

ಹೊಸ ದಿಗಂತ ವರದಿ ಕೊಡುಗು:

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಸಂಘದ ನಿರ್ದೇಶಕರಾಗಿ ಕೊಡಗಿನ ಇಬ್ಬರು ಆಯ್ಕೆಯಾಗಿದ್ದಾರೆ.
ಪತ್ರಿಕಾ ವಿತರಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ಭರವಸೆಯ ಹಿನ್ನಲೆಯಲ್ಲಿ ಶಂಕರ್ ಧರ್ಮಣ್ಣ ಕುದರಿಮೋತಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ನಡೆದ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ಸಭೆಯಲ್ಲಿ ಮಡಿಕೇರಿ ಶಿವಪ್ರಸಾದ ಭಟ್ ಹಾಗೂ ಟಿ.ಜಿ.ಸತಿಶ್ ಅವರನ್ನು ರಾಜ್ಯ ಸಮಿತಿ ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೊಡಗಿನ ಮಡಿಕೇರಿಯಲ್ಲಿ ‘ಹೊಸದಿಗಂತ’ ಸೇರಿದಂತೆ ವಿವಿಧ ಪತ್ರಿಕೆಗಳ ವಿತರಕರಾಗಿ ಶಿವಪ್ರಸಾದ್ ಭಟ್ ಹಾಗೂ ಸತೀಶ್ ಟಿ.ಜಿ ಅವರು ಸತತ ಮೂವತ್ತೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಫೋಟೋ: ಸತೀಶ್, ಶಿವಪ್ರಸಾದ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss