ಹೊಸ ದಿಗಂತ ವರದಿ, ಕೊಡಗು:
ಕೊಡಗು ಜಿಲ್ಲೆಯಲ್ಲಿ ಗುರುವಾರ 19 ಹೊಸ ಕೋವಿಡ್-19ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 123ಕ್ಕೆ ಏರಿಕೆಯಾಗಿದೆ.
ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ತಲಾ 6, ಸೋಮವಾರಪೇಟೆ ತಾಲೂಕಿನಲ್ಲಿ 7 ಪ್ರಕರಣಗಳು ಕಂಡುಬಂದಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 6508ರಷ್ಟಾಗಿದ್ದು, ಈ ಪೈಕಿ 6302ಮಂದಿ ಗುಣಮುಖರಾಗಿದ್ದಾರೆ.
123 ಸಕ್ರಿಯ ಪ್ರಕರಣಗಳಿದ್ದು, 83ಮಂದಿ ಸಾವಿಗೀಡಾಗಿದ್ದಾರೆ.
ಗುರುವಾರ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ, ಹೊಸಬೀಡು, ಕುಶಾಲನಗರ ನಾಗೇಗೌಡ ಬಡಾವಣೆ,ಚಿಕ್ಕತ್ತೂರು ಹಾರಂಗಿ ರಸ್ತೆ, ನೆಲ್ಲಿಹುದಿಕೇರಿಯ ನಲ್ವತ್ತೆಕರೆ, ವೀರಾಜಪೇಟೆ ತಾಲೂಕಿನ ಆನಂದಪುರ,ಮಾಲ್ದಾರೆಯ ಕಲ್ಳಳ್ಳ,ಕರಡಿಗೋಡು, ಅಮ್ಮತ್ತಿಯ ಬಿಳುಗುಂದ, ವೀರಾಜಪೇಟೆ ಚಿಕ್ಕ ಪೇಟೆಯ ಜೂನಿಯರ್ ಕಾಲೇಜು ರಸ್ತೆ,ಮಡಿಕೇರಿಯ ಮಂಗಳಾದೇವಿ ರಸ್ತೆ,ಪ್ರಕೃತಿ ಲೇಔಟ್,ಮೇಕೇರಿ,ನಾಪೋಕ್ಲು ಇಂದಿರಾನಗರಗಳಲ್ಲಿ ಹೊಸದಾಗಿ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 94 ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವಿವರಿಸಿದ್ದಾರೆ.