Thursday, August 11, 2022

Latest Posts

ಕೊಡಗು| ಪ್ರತಿಭಟನಾಕಾರರ ಮೇಲೆ ಹೆಜ್ಜೇನುಗಳ ಹಠಾತ್ ದಾಳಿ!

ಹೊಸ ದಿಗಂತ ವರದಿ, ಮಡಿಕೇರಿ:

ಹುಲಿ ದಾಳಿ ನಿಗ್ರಹಕ್ಕೆ ಆಗ್ರಹಿಸಿ ಪೊನ್ನಂಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಪ್ರತಿಭಟನೆಗೆ ಇಳಿದಿರುವವರ ಮೇಲೆ ಹೆಜ್ಜೇನುಗಳು ಹಠಾತ್ ದಾಳಿ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಬೆಳ್ಳೂರು ಗ್ರಾಮದಲ್ಲಿ ಅಹೋರಾತ್ರಿ ಪ್ರತಿಭಟನೆಗೆ ಇಳಿದಿರುವ ರೈತ ಸಂಘದ ಪ್ರಮುಖರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರ ಮೇಲೆ, ಅಲ್ಲೇ ಸಮೀಪದ ಮರದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ದಾಳಿ ನಡೆಸಿವೆ.
ತಕ್ಷಣ ಪ್ರತಿಭಟನಾಕಾರರು ಹೆಜ್ಜೇನುಗಳಿಂದ ಪಾರಾಗಲು ತಮ್ಮಲ್ಲಿದ್ದ ಟವೆಲ್, ಕರವಸ್ತ್ರಗಳಿಂದ ಮುಖ ಮುಚ್ಚಿಕೊಂಡು ಹೆಜ್ಜೇನು ಗೂಡು ಇದ್ದ ಪ್ರದೇಶದಿಂದ ದೂರ ಸರಿದರು. ಕೆಲ ಸಮಯಗಳ ಬಳಿಕ ಹೆಜ್ಜೇನುಗಳು ಸ್ಥಳದಿಂದ ಚದುರಿದ್ದು, ಗ್ರಾಮಿಣರು ಪ್ರತಿಭಟನೆ ಮುಂದುವರೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss