Tuesday, July 5, 2022

Latest Posts

ಕೊಡಗಿನಲ್ಲಿ ಮತ್ತೆ 30 ಕೊರೋನಾ ಪ್ರಕರಣ ದೃಢ: ಎರಡೇ ದಿನದಲ್ಲಿ 102 ಮಂದಿಗೆ ಸೋಂಕು

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 30 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಕೇವಲ ಎರಡೇ ದಿನದಲ್ಲಿ ಜಿಲ್ಲೆಯಲ್ಲಿ 102 ಮಂದಿಗೆ ಸೋಂಕು ತಗುಲಿದಂತಾಗಿದೆ.
ಮಡಿಕೇರಿ ತಾಲೂಕಿನಲ್ಲಿ 13, ಸೋಮವಾರಪೇಟೆ ತಾಲೂಕಿನಲ್ಲಿ 8 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 9 ಹೊಸ ಕೋವಿಡ್ ಪ್ರಕರಣ ಕಂಡುಬಂದಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 6751ಕ್ಕೆ ಏರಿಕೆಯಾಗಿದ್ದು, ಈ ಪೈಕಿ 6422 ಮಂದಿ ಗುಣಮುಖರಾಗಿದ್ದಾರೆ. 246 ಸಕ್ರಿಯ ಪ್ರಕರಣಗಳಿದ್ದು, 83 ಮಂದಿ ಸಾವಿಗೀಡಾಗಿದ್ದಾರೆ .
ಶುಕ್ರವಾರ ಮಡಿಕೇರಿಯ ತಾಳತ್ ಮನೆ, ಮುನೇಶ್ವರ ದೇವಸ್ಥಾನದ ಬಳಿ, ಚೈನ್ ಗೇಟ್, ಸೋಮವಾರಪೇಟೆ ತಾಲೂಕಿನ ಅಂಜನಗೇರಿ ಬೆಟ್ಟಗೇರಿ, ಚೌಡ್ಲು, ಕಾರೆಕೊಪ್ಪ, ಕುಶಾಲನಗರದ ಬಿ.ಎಂ.ರಸ್ತೆ, ವಾಲ್ನೂರು, ಚೇರಳ ಶ್ರೀಮಂಗಲ, ವೀರಾಜಪೇಟೆಯ ಪಂಜರಪೇಟೆ ಮೊರಾರ್ಜಿ ಶಾಲೆ,ತಿತಿಮತಿಯ ನೊಕ್ಯ,ಮುಗುಟಗೇರಿ, ಹೆಗ್ಗಳ, ಬಿ.ಶೆಟ್ಟಿಗೇರಿ, ಕಾರ್ಮಾಡುಗಳಲ್ಲಿ ಹೊಸ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 156ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss