Monday, August 8, 2022

Latest Posts

ಕೊಡಗಿನಲ್ಲಿ ಭಾನುವಾರ 6 ಹೊಸ ಕೋವಿಡ್ ಸೋಂಕು ಪತ್ತೆ: ನಾಳೆ ಹಿರಿಯ ನಾಗರೀಕರಿಗೆ ಲಸಿಕೆ ಅಭಿಯಾನ

ಹೊಸದಿಗಂತ ವರದಿ, ಕೊಡಗು:

ಜಿಲ್ಲೆಯಲ್ಲಿ ಭಾನುವಾರ ಮತ್ತೆ 6 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸೋಮವಾರಪೇಟೆ ತಾಲೂಕು ಒಂದರಲ್ಲೇ 5 ಪ್ರಕರಣಗಳು ಪತ್ತೆಯಾಗಿವೆ.

ಮಡಿಕೇರಿ ತಾಲೂಕಿನಲ್ಲಿ  ಒಂದು ಹೊಸ ಕೋವಿಡ್ ಪ್ರಕರಣ ಕಂಡುಬಂದಿದೆ ಇದರೊಂದಿಗೆ ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 6188 ರಷ್ಟಾಗಿದ್ದು, ಈ ಪೈಕಿ 6070 ಮಂದಿ ಗುಣಮುಖರಾಗಿದ್ದಾರೆ.

36 ಸಕ್ರಿಯ ಪ್ರಕರಣಗಳಿದ್ದು, 82 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 26ರಷ್ಟಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

ನಾಳೆ ಹಿರಿಯ ನಾಗರಿಕರಿಗೆ ಲಸಿಕೆ: ಕೊಡಗು ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಹಾಗೂ 45 ರಿಂದ 59 ವರ್ಷದವರೆಗಿನ ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ತಮಾ ಮತ್ತಿತರ ಖಾಯಿಲೆ ಹೊಂದಿರುವವರಿಗೆ ಕೋವಿಡ್-19 ಲಸಿಕಾ ಅಭಿಯಾನವನ್ನು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸೂಚನೆಗಳ ಅನ್ವಯ ಮಾ.1ರಂದು ಸಾಂಕೇತಿಕವಾಗಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಅದರಂತೆ ಸೋಮವಾರ ಅಪರಾಹ್ನ 12 ರಿಂದ ಸಂಜೆ 5ಗಂಟೆವರೆಗೆ ಜಿಲ್ಲಾ ಆಸ್ಪತ್ರೆ ಮಡಿಕೇರಿ, ಸೋಮವಾರಪೇಟೆ ಹಾಗೂ  ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ.ಈ ಮೇಲಿನ ವಯೋಮಾನದವರು ಆಯಾ  ಲಸಿಕಾ ಕೇಂದ್ರಗಳಲ್ಲಿ ಆಯಾ ದಿನವೇ ನೋಂದಣಿ ಮಾಡಿಸಿಕೊಂಡು ಕೋವಿಡ್ ಲಸಿಕೆಯನ್ನು ಪಡೆಯಬಹುದಾಗಿದ್ದು,ಲಸಿಕೆಗೆ ಆಗಮಿಸುವವರು ಆಧಾರ್ ಕಾರ್ಡ್ ಪ್ರತಿ ಅಥವಾ ಭಾರತ ಸರ್ಕಾರ ಅಥವಾ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಿರುವ ಫೋಟೊ ಮತ್ತು ವಿಳಾಸ ಹೊಂದಿರುವ ಗುರುತಿನ ದಾಖಲಾತಿಗಳ ಪ್ರತಿಯನ್ನು ಹಾಜರು ಪಡಿಸಬೇಕಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss