ಹೊಸದಿಗಂತ ವರದಿ, ಕೊಡಗು:
ಕೊರೋನಾ ನಿಯಂತ್ರಣಕ್ಕೆ ನೆರೆಯ ಜಿಲ್ಲೆಗಳಲ್ಲಿ ಕೊರೋನಾ ಕಫ್ಯೂ೯ ಸೇರಿದಂತೆ ಕಠಿಣ ನಿಯಮಗಳನ್ನು ಹೇರಿರುವ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಗುರುವಾರ ಕೊರೋನಾ ಮಹಾಸ್ಫೋಟ ಸಂಭವಿಸಿದ್ದು, ಒಂದೇ ದಿನ 72 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದೆ.
ಮಡಿಕೇರಿ ತಾಲೂಕಿನಲ್ಲಿ 12,ಸೋಮವಾರಪೇಟೆ ತಾಲೂಕಿನಲ್ಲಿ 27 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 33 ಹೊಸ ಕೋವಿಡ್ ಪ್ರಕರಣ ಕಂಡುಬಂದಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಡು ಕೋವಿಡ್ ಸೋಂಕಿತರ ಸಂಖ್ಯೆ 6721ಕ್ಕೆ ಏರಿಕೆಯಾಗಿದ್ದು, ಈ ಪೈಕಿ 6499 ಮಂದಿ ಗುಣಮುಖರಾಗಿದ್ದಾರೆ. 238 ಸಕ್ರಿಯ ಪ್ರಕರಣಗಳಿದ್ದು, 83 ಮಂದಿ ಸಾವಿಗೀಡಾಗಿದ್ದಾರೆ.
ಗುರುವಾರ ವೀರಾಜಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ, ಹೈಸೊಡ್ಲೂರು, ಚಿಕ್ಕಮಂಡೂರು ಅಪದಪಚ್ಚಕವಿ ಕಾಲೇಜು ಬಳಿ,ಕಳತ್ಮಾಡು, ಪೊನ್ನಪ್ಪಸಂತೆಯ ಅಯ್ಯಪ್ಪ ದೇವಸ್ಥಾನ ಬಳಿ, ಅರಮೇರಿ ಸೊಸೈಟಿ ಬಳಿ, ವೀರಾಜಪೇಟೆ ಸರಕಾರಿ ಬಸ್ ನಿಲ್ದಾಣ ಬಳಿ, ಗೌರಿಕೆರೆ, ಸುಣ್ಣದ ಬೀದಿ, ಅಪ್ಪಯ್ಯ ಸ್ವಾಮಿ ರಸ್ತೆ, ಮೊಗರಗಲ್ಲಿ, ಕೆದಮಳ್ಳೂರು ಚಚ್೯ ಕಾಲೋನಿ, ಪುಲಿಯೇರಿ, ಚೆಂಬೆಬೆಳ್ಳೂರು, ಸೋಮವಾರಪೇಟೆ ತಾಲೂಕಿನಲ ನೆಲ್ಲಿಹುದಿಕೇರಿ ಎಂ.ಜಿ.ಕಾಲೋನಿ, ಕುಶಾಲನಗರ ಕುವೆಂಪು ಬಡಾವಣೆ, ಬಸವನಹಳ್ಳಿ, ಶನಿವಾರಸಂತೆ ವಿಎಸ್ಎಸ್ಎನ್ ಬ್ಯಾಂಕ್ ಬಳಿ, ಕೂಗೂರು, ಮುಳ್ಳೂರು, ಸಂಪಿಗೆದಾಳು, ಕಾಜೂರು, ಹೊಸಗುತ್ತಿ, ಮಡಿಕೇರಿ ತಾಲೂಕಿನ ಕೊಳಕೇರಿ, ಕುರುಳಿ, ಮೂರ್ನಾಡು ಶಾಸ್ತ್ರಿನಗರ, ಅರಪಟ್ಟು ಹಾಗೂ ಮಡಿಕೇರಿಯ ಬ್ರಾಹ್ಮಣರ ಬೀದಿ ಸೇರಿದಂತೆ 28 ಹೊಸ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 149ರಷ್ಟಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.