ಭಾರೀ ಮಳೆಗೆ ನಲುಗಿದ ಭಾಗಮಂಡಲ: ಇಲ್ಲಾಗುತ್ತಿದೆ ಕೊಡಗಲ್ಲೇ ಅತೀ ಹೆಚ್ಚು ಮಳೆ

ಹೊಸದಿಗಂತ ವರದಿ ಮಡಿಕೇರಿ:

ಭಾನುವಾರ ಬೆಳಗ್ಗೆ 8.30 ಕ್ಕೆ ಜಿಲ್ಲೆಯಲ್ಲಿ ಸರಾಸರಿ 66.11ಮಿ.ಮೀ.ಮಳೆ ದಾಖಲಾಗಿದ್ದು, ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ 160 ಮಿ.ಮೀ.ಮಳೆ ಬಿದ್ದಿದೆ. ಉಳಿದಂತೆ ಮಡಿಕೇರಿ ಕಸಬಾ 77.2ಮಿ.ಮೀ,ನಾಪೋಕ್ಲು 100.2 ಮಿ.ಮೀ, ಸಂಪಾಜೆ 133ಮಿ.ಮೀ, ಸೇರಿದಂತೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 71.76ಮಿ.ಮೀ ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕಸಬಾ ಹೋಬಳಿಯಲ್ಲಿ 42.4, ಹುದಿಕೇರಿ 20, ಶ್ರೀಮಂಗಲ 38,ಪೊನ್ನಂಪೇಟೆ 28, ಅಮ್ಮತ್ತಿ 37 ಬಾಳೆಲೆ 22 ಮಿ.ಮೀ.ಸೇರಿದಂತೆ ತಾಲೂಕಿನಲ್ಲಿ ಸರಾಸರಿ 30.73ಮಿ.ಮೀ.ಮಳೆ ಬಿದ್ದಿದೆ.

ಸೋಮವಾರಪೇಟೆ ತಾಲೂಕಿನ ಕಸಬಾ ಹೋಬಳಿಯಲ್ಲಿ 37.8ಮಿ.ಮೀ, ಶನಿವಾರಸಂತೆ 48 ಮಿ.ಮೀ, ಶಾಂತಳ್ಳಿ 110 ಮಿ.ಮೀ, ಕುಶಾಲನಗರ 27.2 ಮಿ.ಮೀ ಹಾಗೂ ಸುಂಟಿಕೊಪ್ಪದಲ್ಲಿ 36 ಮಿ.ಮೀ.ಸೇರಿದಂತೆ ತಾಲೂಕಿನಲ್ಲಿ ಸರಾಸರಿ 50ಮಿ.ಮೀ.ಮಳೆಯಾಗಿರುವುದಾಗಿ ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!