Friday, August 19, 2022

Latest Posts

ಕೊಡಗಿನ ಯುವಕನ ಸಾಧನೆಗೆ ಫಾಲ್ಕೆ ಪ್ರತಿಷ್ಠಾನದ ಪ್ರಶಸ್ತಿಯ ಗರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕೊಡಗು:

ಕೊಡಗಿನ ಯುವಕನೊರ್ವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ‌ ಕೊಡಗಿನ‌ ಶುಂಠಿಕೊಪ್ಪ ಸಮೀಪದ ಕಲ್ಲೂರು ಗ್ರಾಮದ ಪ್ರಶಾಂತ್ ಕಲ್ಲೂರು ಅವರು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ‌ ಮುಡಿಗೆರಿಸಿಕೊಂಡು ಕೊಡಗಿನ ಹಿರಿಮೆ ಹೆಚ್ಚಿಸಿದ್ದಾರೆ.
ಪ್ರಶಾಂತ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ‌ ಪ್ರಶಸ್ತಿ ಲಭಿಸಿದೆ. ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಪ್ರಶಾಂತ್, ತಮ್ಮ ‘ಕಲ್ಲೂರ್ ಸಿನಿಮಾಸ್’ ಮೂಲಕ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ.ತಮ್ಮದೆ ಆದ ಸಾಫ್ಟ್ವೇರ್ ಕಂಪೆನಿಯೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಪ್ರಶಾಂತ್ ‘ಬಸವಜ್ಯೋತಿ’ ಎಂಬ ಮಾಸಿಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.
ವೀರಶೈವ ಲಿಂಗಾಯತ ಯುವ ವೇದಿಕೆ ಮೂಲಕ ಹಲವಾರು ವರ್ಷಗಳ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಸೇವೆಯನ್ನು ಗುರುತಿಸಿ ಫಾಲ್ಕೆ ಕುಟುಂಬಸ್ಥರು ಕೊಡಮಾಡುವ ಪ್ರತಿಷ್ಠಿತ “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 2021ನ್ನು ಜು 11ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ್ ಫಾಲ್ಕೆ ಹಾಗೂ ಚಿತ್ರನಟ ಸುಮನ್ ತಲ್ವಾರ್ ಅವರಿಂದ ಸ್ವೀಕರಿಸಿದ್ದಾರೆ.
ಸಮಾಜ ಸೇವೆಯ ಮೂಲಕ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದು ಕೊಡಗಿನ ಹಿರಿಮೆ ಹೆಚ್ಚಿಸಿರುವ ಪ್ರಶಾಂತ್ ಕಲ್ಲೂರ್ ಸಾಧನೆಗೆ ಶರಣ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಎಸ್.ಮಹೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!