ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊಡವ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ತ್ರಿಭಾಷಾ ಸಾಹಿತಿಗಳೆಂದು ಪ್ರಸಿದ್ಧಿ ಪಡೆದಿದ್ದ ಡಾಕ್ಟರ್ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಜೂನ್ 13ರಂದು ಗೂಗಲ್ ಮೀಟ್ ನಲ್ಲಿ ನಡೆಯಲಿದೆ.
ಕಳೆದ ವರ್ಷದಿಂದ ಸತತ ಆರು ತಿಂಗಳುಗಳ ಕಾಲ ಉಭಯ ಸಾಹಿತಿಗಳ ನೆನಪಿನಲ್ಲಿ ತಿಂಗಳಿಗೊಂದು ಸಾಹಿತ್ಯಾತ್ಮಕ ಸ್ಪರ್ಧೆಯನ್ನು ಆಯೋಜಿಸಿ, ಕೊರೋನಾ ಕಾರಣದಿಂದ ಮುಂದೂಡಿದ್ದ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು, ಕೊರೋನಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವೆಬಿನಾರ್’ನಲ್ಲಿ ನಡೆಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಅಂದು ಬೆಳಿಗ್ಗೆ 11 ಘಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಶ್ರೀ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಚಾಮೆರ ದಿನೇಶ್’ಬೆಳ್ಯಪ್ಪ ಅವರು ವಹಿಸಲಿದ್ದಾರೆ. ಶತಮನೋತ್ಸವ ನೆನಪಿನಲ್ಲಿ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಬರೆದಿರುವ ಮೂವ ರಂಗ್’ರ ಮುತ್ತಣ್ಣ ಹಾಗೂ ಗತ್ತ್ ಕೋಂದ ಗಣಪತಿ ಎಂಬ ಎರಡು ಕೃತಿಗಳನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಅಪ್ಪಣ್ಣ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಐಚೆಟ್ಟಿರ ಒಕ್ಕ ಅಧ್ಯಕ್ಷರಾದ ಐಚೆಟ್ಟಿರ ಮೋಹನ್ ದೇವಯ್ಯ ಬಾಚಮಾಡ ಒಕ್ಕದ ಹಿರಿಯರಾದ ಬಾಚಮಾಡ ಸೋಮಯ್ಯ, ಸಾಹಿತಿ ಬಾಚಮಾಡ ಡಿ ಸುಬ್ಬಯ್ಯ ಅವರ ಪುತ್ರ ಬಾಚಮಾಡ ವಸಂತ್, ಐಚೆಟ್ಟಿರ ಒಕ್ಕ ಕಾರ್ಯದರ್ಶಿ ಐಚೆಟ್ಟಿರ ರಾಯ್ ತಿಮ್ಮಯ್ಯ ಅವರುಗಳು ಉಪಸ್ಥಿತರಿರುವರು. ಡಾಕ್ಟರ್ ಐ.ಮಾ. ಮುತ್ತಣ್ಣ ಬಾಳ್, ಬದುಕ್, ಸಾಹಿತ್ಯ ಎಂಬ ವಿಚಾರವಾಗಿ ಐಚೆಟ್ಟಿರ ಪುಷ್ಪ ಅಪ್ಪಚ್ಚು ಅವರು ವಿಚಾರ ಮಂಡಿಸಿದರೆ, ಬಿ.ಡಿ. ಗಣಪತಿ ಬಾಳ್, ಬದುಕ್, ಸಾಹಿತ್ಯ ಎಂಬ ವಿಚಾರವಾಗಿ ಬಾಚಮಾಡ ಭೀಮಯ್ಯ ಅವರು ವಿಚಾರ ಮಂಡಿಸಲಿರುವರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.
ಕೊಡವಾಭಿಮಾನಿ, ಸಾಹಿತಿಗಳು ಗೂಗಲ್ ಮೀಟ್’ನ ಈ ಕೆಳಗಿನ ಲಿಂಕ್ ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಡವಾಮೆರ ಕೊಂಡಾಟ (ರಿ) ಸಂಘಟನೆ, ಮತ್ತು ಐಚೆಟ್ಟಿರ ಹಾಗೂ ಬಾಚಮಾಡ ಒಕ್ಕ ಸದಸ್ಯರು ಮನವಿ ಮಾಡಿದ್ದಾರೆ.
ಈ ಲಿಂಕ್ ನ ಮೂಲಕ ನೀವು ಸೇರಬಹುದು:
To join the meeting on Google Meet, click this link:
https://meet.google.com/qde-wtuy-nzr
Or open Meet and enter this code: qde-wtuy-nzr