spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಹ್ಲಿ- ಮ್ಯಾಕ್ಸ್​ವೆಲ್ ಅರ್ಧಶತಕ: ಮುಂಬೈ ಇಂಡಿಯನ್ಸ್ ಗೆಲುವಿಗೆ 166 ಟಾರ್ಗೆಟ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿರಾಟ್​ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಬೆಂಗಳೂರು165 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್​ ಸೋತು ಆರ್​ಸಿಬಿ ಬ್ಯಾಟಿಂಗ್‌ಗೆ ಬರುತ್ತಿದ್ದಂತೆ ಯುವ ಆರಂಭಿಕ ಬ್ಯಾಟರ್​ ದೇವದತ್​ ಪಡಿಕ್ಕಲ್​(0) ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಯಿತು.
ನಾಯಕ ವಿರಾಟ್​ ಕೊಹ್ಲಿ 2ನೇ ವಿಕೆಟ್​ ಜೊತೆಯಾಟದಲ್ಲಿ ವಿಕೆಟ್ ಕೀಪರ್ ಶ್ರೀಕಾರ್ ಭರತ್​ರೊಂದಿಗೆ 68 ರನ್​ ಕಲೆ ಹಾಕಿದರು. ಭರತ್​ 24 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ 32 ರನ್​ಗಳಿಸಿ ರಾಹುಲ್​ ಚಹರ್​ಗೆ ವಿಕೆಟ್​ ನೀಡಿದರು.
ನಂತರ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್​ವೆಲ್ 3ನೇ ವಿಕೆಟ್​ಗೆ 61 ರನ್​ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಮಿಲ್ನೆ ಓವರ್​ನಲ್ಲಿ ಅನುಕುಲ್ ರಾಯ್​ಗೆ ಕ್ಯಾಚ್​ ನೀಡಿ ಔಟಾದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಮ್ಯಾಕ್ಸ್​ವೆಲ್ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 56 ರನ್​ಗಳಿಸಿ ಬುಮ್ರಾ ಬೌಲಿಂಗ್​ನಲ್ಲಿ ಔಟಾದರು. ಇದೇ ಓವರ್​ನಲ್ಲಿ 11 ರನ್​ಗಳಿಸಿದ್ದ ಎಬಿಡಿ ವಿಲಿಯರ್ಸ್ ಕೂಡ ಔಟಾಗಿದ್ದರಿಂದ ಆರ್​ಸಿಬಿ ಕೊನೆಯ 9 ಎಸೆತಗಳಲ್ಲಿ ಕೇವಲ 5 ರನ್​ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 36ಕ್ಕೆ 3 ವಿಕೆಟ್ , ಬೌಲ್ಟ್​ 17ಕ್ಕೆ1, ಆ್ಯಡಮ್ ಮಿಲ್ನೆ 48ಕ್ಕೆ1, ರಾಹುಲ್ ಚಹರ್​ 33ಕ್ಕೆ1 ವಿಕೆಟ್​ ಪಡೆದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss