Wednesday, August 17, 2022

Latest Posts

ಕೊಹ್ಲಿ ಅರ್ಧಶತಕ: ಇಂಗ್ಲೆಂಡ್ ಗೆ 157 ರನ್​ಗಳ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 157 ರನ್​ಗಳ ಟಾರ್ಗೆಟ್ ನೀಡಿದೆ.
ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾ ಉತ್ತಮ ಆರಂಭ ದೊರೆಯಲಿಲ್ಲ.
ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ರೋಹಿತ್ ಶರ್ಮಾ (15) ಮಾರ್ಕ್​ವುಡ್​ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್ ಈ ಬಾರಿ ಕೇವಲ 4 ರನ್​ಗೆ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್​ಗೆ 40 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಸುಸ್ಥಿತಿಗೆ ತಂದರು.ಈ ವೇಳೆ ರನ್ ಕದಿಯುವ ತವಕದಲ್ಲಿ ರನೌಟ್ ಆಗುವ ಮೂಲಕ ರಿಷಭ್ ಪಂತ್ (20) ವಿಕೆಟ್ ಕೈಚೆಲ್ಲಿದರು.
ಮತ್ತೆ ಬಂದ ಶ್ರೇಯಸ್ ಅಯ್ಯರ್ (9) ಮಾರ್ಕ್​ವುಡ್​ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಆದರೆ ಮತ್ತೊಂದೆಡೆ ಆಕರ್ಷಕವಾಗಿ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ರನ್​ ಹೆಚ್ಚಿಸುತ್ತಾ ಹೋದರು. ಈ ವಿರಾಟ್ ಕೊಹ್ಲಿ 46 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 77 ರನ್​ ಕಲೆಹಾಕಿದರು. ಕೊಹ್ಲಿ ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ (17) ಉತ್ತಮ ಸಾಥ್ ನೀಡಿದರು. ಅಲ್ಲದೆ ಟೀಮ್ ಇಂಡಿಯಾ ಮೊತ್ತವನ್ನು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ಕ್ಕೆ ತಂದು ನಿಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!