ಭಾರತ ಟೆಸ್ಟ್ ತಂಡ ಇಂದು ಅತ್ಯುತ್ತಮ ಸ್ಥಾನದಲ್ಲಿದೆ ಎಂದರೆ ಅದರ ಶ್ರೇಯ ಕೊಹ್ಲಿಗೆ ಸಲ್ಲುತ್ತದೆ: ರೋಹಿತ್ ಶರ್ಮಾ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿಯ ಕುರಿತು ಹಾಲಿ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಟೆಸ್ಟ್​ ತಂಡ ಇಂದು ಅತ್ಯುತ್ತಮ ಸ್ಥಾನದಲ್ಲಿದೆ ಎಂದರೆ, ಆ ಯಶಸ್ಸಿನ ಶ್ರೇಯ ವಿರಾಟ್​ ಕೊಹ್ಲಿಗೆ ಸಲ್ಲಬೇಕು ಎಂದು ಗುಣಗಾನ ಮಾಡಿದರು.

ಇಂದು ನಾವು ಅತ್ಯುತ್ತಮ ಸ್ಥಾನದಲ್ಲಿದ್ದೇವೆ. ಇದರ ಸಂಪೂರ್ಣ ಸಂಪೂರ್ಣ ಕೊಡುಗೆ ಕೊಹ್ಲಿಗೆ ಸಲ್ಲುತ್ತದೆ. ಅವರು ಟೆಸ್ಟ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಾಡಿದ ಸಾದನೆಗಳನ್ನು ನೋಡಿದಾಗ ಖುಷಿ ಆಗುತ್ತೆ. ಇದೀಗ ಅವರು ಬಿಟ್ಟು ಹೋಗಿರುವ ಸ್ಥಳದಿಂದ ನಾನು (ನಾಯಕತ್ವ) ಅದನ್ನು ತೆಗೆದುಕೊಳ್ಳಬೇಕಾಗಿದೆ. ಸೂಕ್ತವಾದ ಆಟಗಾರರೊಂದಿಗೆ ಸರಿಯಾದ ಕೆಲಸವನ್ನು ತೆಗಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ರೋಹಿತ್ ಶರ್ಮಾ ಹೇಳಿದರು

100ನೇ ಟೆಸ್ಟ್​ ಪಯಣದಲ್ಲಿ ಸಾಧಕ
ಕೊಹ್ಲಿಗೆ ಟೆಸ್ಟ್​ ಪಯಣ ಅದೊಂದು ಸುದೀರ್ಘ ಪಯಣ. ಇದೀಗ 100ನೇ ಟೆಸ್ಟ್​ ಪಂದ್ಯವನ್ನಾಡಲು ಹೊರಟಿದ್ದಾರೆ ಇದು ಅವರ ಅದ್ಭುತ ಸಾಧನೆಯಾ ಕೈಕನ್ನಡಿ. ಅವರು ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಹಲವು ಮಹತ್ವದ ಬದಲಾವಣೆ ಮಾಡಿದ್ದಾರೆ ಎಂದು ರೋಹಿತ್ ಶ್ಲಾಘಿಸಿದರು.

ಇನ್ನು ಕೊಹ್ಲಿ ಪಾಲಿನ 100ನೇ ಟೆಸ್ಟ್​ ಪಂದ್ಯವನ್ನು ನಾವು ವಿಶೇಷವಾಗಿಸಲು ಬಯಸುತ್ತೇವೆ. ನಾವೆಲ್ಲರೂ ಅದಕ್ಕಾಗಿ ಸಿದ್ಧರಿದ್ದೇವೆ ಮತ್ತು ಐದು ದಿನಗಳ ಕ್ರಿಕೆಟ್ ಅತ್ಯುತ್ತಮವಾಗಿರಲಿದೆ.
ಇದೇ ವೇಳೆ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಗೆದ್ದ ಸರಣಿಗಳನ್ನು ರೋಹಿತ್ ಸ್ಮರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!