Sunday, August 14, 2022

Latest Posts

ಕೊಹ್ಲಿ-ಪಡಿಕ್ಕಲ್ ಶತಕದ ಆಟ: ಚೆನ್ನೈ ಗೆ 157 ರನ್​​ ಟಾರ್ಗೆಟ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 156 ರನ್​ಗಳಿಕೆ ಮಾಡಿದ್ದು, ಎದುರಾಳಿ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಗೆಲುವಿಗೆ 157 ರನ್​​ ಸ್ಪರ್ಧಾತ್ಮಕ ಗುರಿ​ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ದೇವದತ್​ ಪಡಿಕ್ಕಲ್​ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಎದುರಾಳಿ ತಂಡದ ಬೌಲರ್​ಗಳ ಮೇಲೆ ದಾಳಿ ನಡೆಸಿ ಶತಕದ ಆಟವಾಡಿದರು.
53ರನ್​ಗಳಿಕೆ ಮಾಡಿದ್ದ ವೇಳೆ ವಿರಾಟ್​​ ಬ್ರಾವೋ ಓವರ್​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಕಣಕ್ಕಿಳಿದ ಎಬಿಡಿ ಕೂಡ 12ರನ್​ಗಳಿಸಿ ಥಾಕೂರ್​ ಓವರ್​ನಲ್ಲಿ ವಿಕೆಟ್​​​ ಒಪ್ಪಿಸಿದರು. 70ರನ್​ಗಳಿಕೆ ಮಾಡಿ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದ ಪಡಿಕ್ಕಲ್​ ಕೂಡ ಬ್ರಾವೋ ಓವರ್​ನಲ್ಲೇ ವಿಕೆಟ್ ನೀಡಿದ್ದರಿಂದ ತಂಡ ದಿಢೀರ್ ಆಘಾತಕ್ಕೊಳಗಾಯಿತು.
200ರ ರನ್​ ಗಡಿ ದಾಟುವ ಗುರಿಯಲ್ಲಿದ್ದ ಆರ್​ಸಿಬಿ ತಂಡಕ್ಕೆ ಎದುರಾಳಿ ಬೌಲರ್​ಗಳು ಆಘಾತ ನೀಡಿದರು. ವಿರಾಟ್​​-ದೇವದತ್ ವಿಕೆಟ್ ಪತನಗೊಂಡ ಬಳಿಕ ಯಾವೊಬ್ಬ ಪ್ಲೇಯರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಎಬಿಡಿ 12, ಮ್ಯಾಕ್ಸ್​ವೆಲ್​​ 11, ಡೇವಿಡ್​​ 1, ಪಟೇಲ್​ 3 ಹಾಗೂ ಹಸರಂಗ್​​ 1ರನ್​ಗಳಿಕೆ ಮಾಡಿದರು. ಹೀಗಾಗಿ ತಂಡ ನಿಗದಿತ 20 ಓವರ್​ಗಳಲ್ಲಿ 6ವಿಕೆಟ್​ನಷ್ಟಕ್ಕೆ 156ರನ್​ಗಳಿಕೆ ಮಾಡಿತು.
ಚೆನ್ನೈ ಪರ ಬ್ರಾವೋ 3 ವಿಕೆಟ್ ಪಡೆದು ಗಮನ ಸೆಳೆದರೆ, ಠಾಕೂರ್ 2 ವಿಕೆಟ್ ಹಾಗೂ ಚಹರ್​ 1 ವಿಕೆಟ್​ ಕಬಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss