ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೈದರಾಬಾದ್ ಬೌಲಿಂಗ್ ದಾಳಿಗೆ ಮಂಕಾದ ಆರ್ ಸಿಬಿ: ಗೆಲುವಿಗೆ 150ರನ್​ಗಳ ಟಾರ್ಗೆಟ್ ನೀಡಿದ ಕೊಹ್ಲಿ ಬಳಗ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ನ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್​ಗೆ 150 ರನ್​ಗಳ ಟಾರ್ಗೆಟ್ ನೀಡಿದ್ದು, ಸನ್​ರೈಸರ್ಸ್​ ಹೈದರಾಬಾದ್​ ಶಿಸ್ತು ಬದ್ದ ಬೌಲಿಂಗ್ ದಾಳಿಯ ಮುಂದೆ ಮಂಕಾದ ಆರ್​ಸಿಬಿ ಬ್ಯಾಟ್ಸ್​​ಮನ್​ಗಳು ರನ್​ಗಳಿಸಲು ಪರದಾಡಿದರು.
ಟಾಸ್​ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು, ಈ ಹಿನ್ನೆಲೆ ಬ್ಯಾಟಿಂಗ್ ಇಳಿದ ಆರ್ ಸಿಬಿ ಆರಂಭದಲ್ಲೇ ಪಡಿಕ್ಕಲ್​(11) ವಿಕೆಟ್ ಕಳೆದುಕೊಂಡಿತ್ತು.
ನಂತರ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಬಂದ ಶಹ್ಬಾಜ್ ಅಹ್ಮದ್​ 10 ಎಸೆತಗಳಲ್ಲಿ 14 ರನ್​ಗಳಿಸಿ ನದೀಮ್​ಗೆ ವಿಕೆಟ್ ಒಪ್ಪಿಸಿದರು. 3ನೇ ವಿಕೆಟ್​ ಒಂದಾದ ಕೊಹ್ಲಿ ಮತ್ತು ಮ್ಯಾಕ್ಸ್​ವೆಲ್​ 44 ರನ್​ ಜೊತೆಯಾಟ ನೀಡಿದರು.
ಈ ಹಂತದಲ್ಲಿ 29 ಎಸೆತಗಳಲ್ಲಿ 33 ರನ್​ಗಳಿಸಿದ್ದ ವಿರಾಟ್​ ಕೊಹ್ಲಿ ವಿಕೆಟ್ ಪಡೆದು ಆರ್​ಸಿಬಿಗೆ ಆಘಾತ ನೀಡಿದರು. ನಂತರ ಬಂದ ವಿಲಿಯರ್ಸ್​ರನ್ನು​ 1 ರನ್​ಗೆ ಔಟ್ ಮಾಡುವ ಮೂಲಕ ರಶೀದ್ ಖಾನ್​ ಆರ್​ಸಿಬಿಯ ರನ್ ಏರಿಕೆಗೆ ತಡೆ ನೀಡಿದರು.
ಆದರೆ ಆ ಬೇಲಿಕ ಬಂದ ಆಟಗಾರವು ಉತ್ತಮ ಆಟವಾಡಲಿಲ್ಲ. ವಾಷಿಂಗ್ಟನ್ ಸುಂದರ್ 8, ಡೇನಿಯಲ್ ಕ್ರಿಸ್ಚಿಯನ್ 1, ಕೈಲ್ ಜೇಮಿಸನ್ 12 ರನ್​ಗಳಿಸಿ ಔಟಾದರು. ಆದರೆ ಏಕಾಂಗಿಯಾಗಿ ಹೋರಾಡಿದ ಗ್ಲೇನ್ ಮ್ಯಾಕ್ಸ್​ವೆಲ್ 41 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 5 ಬೌಂಡರಿ ಸೇರಿದಂತೆ 59 ರನ್​ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು.
ಸನ್​ರೈಸರ್ಸ್​ ಹೈದರಾಬಾದ್​ ಪರ ಜೇಸನ್ ಹೋಲ್ಡರ್​ 30ಕ್ಕೆ 3, ರಶೀದ್ ಖಾನ್ 18ಕ್ಕೆ 2ಮ ನದೀಮ್​ 36ಕ್ಕೆ 1, ಭುವನೇಶ್ವರ್ ಕುಮಾರ್ 30ಕ್ಕೆ1 ಮತ್ತು ನಟರಾಜನ್​ 32ಕ್ಕೆ 1 ವಿಕೆಟ್ ಪಡೆದು ಆರ್​ಸಿಬಿಯನ್ನು 149ಕ್ಕೆ ಕಟ್ಟಿ ಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss