ಕೊಲ್ಕತ್ತಾದ ಟ್ರೈನಿ ವೈದ್ಯೆ ರೇಪ್‌& ಮರ್ಡರ್‌: ಸಾಮಾಜಿಕ ಜಾಲತಾಣದ ತುಂಬಾ Justice ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಲ್ಕತ್ತಾದ ಟ್ರೈನಿ ವೈದ್ಯೆಯ ಬರ್ಬರ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ನ್ಯಾಯ ಎಲ್ಲಿದೆ ಎನ್ನುವ ಪೋಸ್ಟ್‌ ವೈರಲ್‌ ಆಗಿದೆ.

ವೈರಲ್‌ ಪೋಸ್ಟ್‌ನಲ್ಲೇನಿದೆ?

ತಂದೆ ಬಂದು ನೋಡಿದಾಗ ಮಗಳು ನಗ್ನಾಳಾಗಿ ಸತ್ತುಬಿದ್ದಿದ್ದಳು. ಪೆಲ್ವಿಕ್‌ ಗಿರ್‌ಡಲ್‌ ಮುರಿದುಹೋಗಿತ್ತು. ಕನ್ನಡಕದ ಗಾಜು ಕಣ್ಣಿಗೆ ಹೊಕ್ಕಿ ರಕ್ತ ಸೋರುತ್ತಿತ್ತು. ಸಾಯುವ ಮುನ್ನ ಆಕೆ ಅನುಭವಿಸಿದ ನರಕಯಾತನೆ ಯಾವ ಹೆಣ್ಣುಮಗಳಿಗೂ ಬೇಡ. ತಂದೆ ತಾಯಿ ಆಕೆಯ ದೇಹದ ಮುಂದೆ ಕೂತು ಮೂರು ಗಂಟೆ ಕಣ್ಣೀರು ಹಾಕಿದ್ದರು. ಆದರೂ ಮಗಳನ್ನು ಮುಟ್ಟೋದಕ್ಕೆ ಬಿಡಲಿಲ್ಲ. ಒಟ್ಟಾರೆ 150ಗ್ರಾಮ್‌ನಷ್ಟು ಸ್ಪೆರ್ಮ್‌ ಆಕೆ ದೇಹದಲ್ಲಿತ್ತು. ಒಬ್ಬ ವ್ಯಕ್ತಿ ಒಂದು ಬಾರಿಗೆ ಬರೀ 15 ಗ್ರಾಮ್‌ನಷ್ಟು ಸ್ಪರ್ಮ್‌ನ್ನು ಪ್ರೊಡ್ಯೂಸ್‌ ಮಾಡಲು ಸಾಧ್ಯ. ಈವರೆಗೂ ಒಬ್ಬ ಮಾತ್ರ ಅರೆಸ್ಟ್‌ ಆಗಿದ್ದಾರೆ.

ಆದರೆ 10-15 ಮಂದಿ ಆಕೆಯ ಮೇಲೆ ಎರಗಿದ್ದಾರೆ, ಅವರೆಲ್ಲ ಎಲ್ಲಿ? ಕಾಲೇಜ್‌ ಡೀನ್‌ ಅವಳಿಗೇ ತಲೆ ಸರಿಯಿಲ್ಲ ಎಂದು ಸುಮ್ಮನಾಗಿದ್ದಾರೆ. ಈಗ ಕೇಸ್‌ ಸಿಬಿಐ ಕೈ ಸೇರಿದೆ. ಹೊಸದಾಗಿ ಎಲ್ಲ ಕೆಲಸ ಆರಂಭವಾಗಿದೆ. ಈ ಸಮಯದಲ್ಲಿ ಇದು ಬರೀ ಒಬ್ಬ ಡಾಕ್ಟರ್‌ ಮೇಲೆ ಆದ ಅತ್ಯಾಚಾರ ಪ್ರಕರಣ ಆಗಿ ಉಳಿದಿಲ್ಲ. ಏನಾಗ್ತಿದೆ ನಮ್ಮ ಜಗತ್ತಿಗೆ? ಪ್ರತಿ ಬಾರಿಯೂ ಮನುಷ್ಯತ್ವದ ತಳವನ್ನು ಆಳವಾಗಿ ಬಗೆಯುತ್ತಲೇ ಇದ್ದೇವೆ. ನಿರ್ಭಯಾ ಕೇಸ್‌ ನಂತರ ಜಗತ್ತು ಬದಲಾಗಿದೆ. ಯಾರೂ ಯಾರ ಮೇಲೂ ರೇಪ್‌ ಮಾಡೋದಿಲ್ಲ ಎಂದು ಅಂದುಕೊಂಡವರೆಲ್ಲ ದಡ್ಡ ಶಿಕಾಮಣಿಗಳಷ್ಟೇ! ನಿರ್ಭಯಾ ಅತ್ಯಾಚಾರ ಆಗಿ 12 ವರ್ಷಗಳೇ ಕಳೆದಿವೆ. ಈಗಲೂ ಏನೂ ಬದಲಾಗಿಲ್ಲ.

ಯಾರೋ ಭಾರತದಲ್ಲಿ ಡಾಕ್ಟರ್‌ ಆಗೋದೇ ಒಂದು ದೊಡ್ಡ ಕ್ರೈಮ್‌ ಎಂದು ಹೇಳಿದ್ದರು. ಆದರೆ  ಈ ದೇಶದಲ್ಲಿ ಡಾಕ್ಟರ್‌ ಆಗೋದು ಕ್ರೈಮ್‌ ಅಲ್ಲ, ಎಲ್ಲವೂ ಬದಲಾಗಿದೆ, ಬದಲಾಗುತ್ತದೆ ಎನ್ನುವ ಭರವಸೆ ಇಟ್ಟುಕೊಳ್ಳೋದು ಕ್ರೈಮ್‌!! 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!