Sunday, February 28, 2021

Latest Posts

ಜಿಲ್ಲೆಯಲ್ಲಿ ಉಡಾನ್ ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿಗೆ ಕೊಪ್ಪಳ ನಿಯೋಗದಿಂದ ಮನವಿ

ಹೊಸದಿಗಂತ ವರದಿ,ಕೊಪ್ಪಳ:

ಉಡಾನ್ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವ ಬಗ್ಗೆ ಕೊಪ್ಪಳದ ನಿಯೋಗವು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪವರಿಗೆ ಮನವಿ ಮಾಡಲಾಯಿತು.
ಕೊಪ್ಪಳದಲ್ಲಿ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೇಟಿ ಮಾಡಿದ ನೀಯೋಗವು ಕೊಪ್ಪಳ ಜಿಲ್ಲೆಗೆ ಎರಡನೇ ಹಂತದಲ್ಲಿ ಉಡಾನ್ ಯೋಜನೆ ಘೋಷಣೆಯಾಗಿ ಮೂರು ವರ್ಷ ಕಳೆದಿದೆ. ಆದರೂ ಅನುಷ್ಠಾನಗೊಳ್ಳುತ್ತಿಲ್ಲ ಜಿಲ್ಲೆಯಲ್ಲಿ ಉಡಾನ್‍ದ ಅವಶ್ಯಕತೆ ಇದೆ ಉಡಾನ್ ಯೋಜನೆಗೆ ಮುಂದಾಗಬೇಕು ಎಂದು ಮನವಿಸಿದರು.
ನಂತರ ಮನವಿ ಸ್ವೀಕರಿಸಿ ಸಕಾರಾತ್ಮಕ ಸ್ಪಂದಿಸಿದ ಮುಖ್ಯಮಂತ್ರಿ ಯಡಿಒಯೂರಪ್ಪನವರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹಾಗೂ ಶೀಘ್ರದಲ್ಲೇ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿಯವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಬಸವರಾಜ್ ದಡೇಸುಗೂರು, ಪರಣ್ಣ ಮುನವಳ್ಳಿ, ಹಾಗೂ ಅಂದಣ್ಣ ಅಗಡಿ, ಕೆ ಶರಣಪ್ಪ, ದೊಡ್ಡನಗೌಡ ಪಾಟೀಲ್, ತಿಪ್ಪೇರುದ್ರಸ್ವಾಮಿ, ಶರಣು ತಳ್ಳಿಕೇರಿ, ಅಮರೇಶ ಕರಡಿ, ನವೀನ್ ಗುಳಗಣ್ಣನವರ್ ಹಾಗೂ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!