ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ನಮ್ಮ ವಿರೋಧವಿಲ್ಲ: ಡಿ.ಕೆ.ಶಿವಕುಮಾರ್

ಹೊಸದಿಗಂತ ವರದಿ, ಕೊಪ್ಪಳ ‌
ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಲು ಕಾಂಗ್ರೆಸ್ ನ ವಿರೋಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪಠ್ಯೆಯಲ್ಲಿ ಭಗವದ್ಗೀತೆಯ ಪಾಠಗಳನ್ನು ಅಳವಡಿಸಲು ನಮ್ಮ ಒಪ್ಪಿಗೆ ಇದೆ. ನಾವೂ ಹಿಂದೂಗಳು. ನಮ್ಮದು ಯಾವ ವಿರೋಧವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿಯೇ ಎಲ್ಲಾ ಧರ್ಮದ ಗ್ರಂಥಗಳನ್ನು ಓದಲು ಅವಕಾಶ ನೀಡಿದ್ದಾರೆ ಎಂದರು.
ಭಗವದ್ಗೀತೆಯ ಸಾರವನ್ನು ದೇಶಾದ್ಯಂತ ಪ್ರಚಾರ ಪಡಿಸಿದ್ದೇ ಮಾಜಿ ಪ್ರಧಾನಮಂತ್ರಿ ರಾಜೀವ್‌ ಗಾಂಧಿ. ಹಾಗಿದ್ದ ಮೇಲೆ ನಮ್ಮದೇಕೆ ವಿರೋಧ ಇರುತ್ತದೆ. ನಮ್ಮ ಪಕ್ಷದ ರಾಜೀವ್ ಗಾಂಧಿಯವರೇ ಭಗವದ್ಗೀತೆ ಬಗ್ಗೆ ದೇಶದಲ್ಲಿ ಪ್ರಚುರಪಡಿಸಿದ್ದಾರೆ. ಇದೀಗ ಬಿಜೆಪಿಯವರು ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!