ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಕಂಟ್ರೋಲ್ ಗೆ ಕೊಪ್ಪಳ ಸ್ತಬ್ಧ: ಅನಗತ್ಯ ರಸ್ತೆಗಿಳಿದವರಿಗೆ ಲಾಠಿ ಚಾರ್ಜ್

ಹೊಸದಿಗಂತ ವರದಿ, ಕೊಪ್ಪಳ:

ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಎರಡನೇ ಅಲೆ ನಿಯಂತ್ರಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿದ ಲಾಕ್ ಡೌನ್ ನಿಂದಾಗಿ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್ ಆಗಿದೆ.

ಆದರೆ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಅವಕಾಶ ನೀಡಿದ್ದರಿಂದ ಬುಧವಾರ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ಮುಗಿಬಿದ್ದು, ಖರೀದಿಯಲ್ಲಿ ತೊಡಗಿದ್ದು, ಹಲವೆಡೆ ಕಂಡುಬಂದಿತು.

ಇದರ ಬೆನ್ನಲ್ಲೇ ಬೆಳಿಗ್ಗೆ 10 ಗಂಟೆಗೂ ಮೊದಲೇ ಪೊಲೀಸರು ಅಗತ್ಯ ವಸ್ತುಗಳ ಖರೀದಿಗೂ ಬ್ರೇಕ್ ಹಾಕಿದ್ದು, ಅಂಗಡಿಗಳ ಬಾಗಿಲು ಮುಚ್ಚಿಸಿ, ಜನರನ್ನು ವಾಪಸ್ ಕಳುಹಿಸಿದ್ದಾರೆ.

10 ಗಂಟೆಯಾಗುತ್ತಿದ್ದಂತೆ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಿದ್ದಂತೆ ಕೊಪ್ಪಳ ನಗರದಲ್ಲಿ ಕೆಲವು ಬೆರಳಣಿಕೆಯಷ್ಟು ವಾಹನಗಳು ಚಲಾವಣೆ ಹೊರತುಪಡಿಸಿದರೆ ಉಳಿದೆಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿ ಸಂಪೂರ್ಣ ಲಾಕ್ ಡೌನ್ ನಿರ್ಮಾಣವಾಗಿದೆ.

ಕೆಲವು ಅನಗತ್ಯ. ಬೈಕ್ ಸವಾರರನ್ನು ಹಿಡಿದು ಫೈನ್ ಹಾಕುವುದರೊಂದಿಗೆ ಇನ್ನೊಮ್ಮೆ ಅನಗತ್ಯ ರಸ್ತೆಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದರು. ಇದಲ್ಲದೆ ತಹಶೀಲ್ದಾರ ಅಮರೇಶ ಬಿರದಾರ ಹಾಗೂ ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ಕೈಯಲ್ಲಿ ಬಡಿಗೆ ಹಿಡಿದು ಅನಗತ್ಯವಾಗಿ ತಿರುಗುವ ಬೈಕ್ ಸವಾರರನ್ನು ಗಧರಿಸುವ ಮೂಲಕ ಕಳಿಸುವ ದೃಶ್ಯ ಸಾಮಾನ್ಯವಾಗಿತ್ತು.

ಕೆ ಎಸ್ ಆರ್ ಟಿ ಸಿ ಬಸ್ ಗಳು, ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ರಸ್ತೆಗಳು, ಬಸ್ ನಿಲ್ದಾಣಗಳು, ಬೀಕೋ ಎನ್ನುತ್ತಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss