ಕೊಪ್ಪಳದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ: ಸ್ಥಳೀಯ ಜಾನುವಾರು ಸಂರಕ್ಷಣೆಗೆ ಹೊಸ ಬಲ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಲೆತಲಾಂತರಗಳಿಂದ ಕೊಪ್ಪಳ ಜಿಲ್ಲೆಯ ರೈತರು ಸಂರಕ್ಷಿಸಿಕೊಂಡು ಬಂದಿರುವ ವಿಶಿಷ್ಟ ಸ್ಥಳೀಯ ಜಾನುವಾರು ತಳಿಯಾದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ ದೊರೆತಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ (ICAR) ಹಾಗೂ ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ತಳಿ ಸಂಪನ್ಮೂಲ ಸಂಸ್ಥೆ (NBAGR) ಈ ಮಾನ್ಯತೆ ನೀಡಿದ್ದು, ಜಿಲ್ಲೆಯ ಪಶುಸಂಪತ್ತಿನ ಸಂರಕ್ಷಣೆ ಹಾಗೂ ತಳಿ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಈಗಾಗಲೇ ಅಮೃತ ಮಹಲ್, ಹಳ್ಳಿಕಾರ್, ಖಿಲ್ಲಾರ್, ದೇವಣಿ, ಮಲೆನಾಡ ಗಿಡ್ಡ … Continue reading ಕೊಪ್ಪಳದ ‘ಹಿಂಡು ದನ’ಕ್ಕೆ ಅಧಿಕೃತ ತಳಿ ಮಾನ್ಯತೆ: ಸ್ಥಳೀಯ ಜಾನುವಾರು ಸಂರಕ್ಷಣೆಗೆ ಹೊಸ ಬಲ