Friday, June 2, 2023

Latest Posts

ಕೂರ್ಮಗಡ ಜಾತ್ರೆ: ಹರಕೆ ಹೊತ್ತವರಿಗೆ ಮಾತ್ರ ಪ್ರವೇಶ

ಹೊಸದಿಗಂತ ವರದಿ,ಕಾರವಾರ:

ಇದೇ  ಜ. ೧೭ ಮತ್ತು ೧೮ ರಂದು ಜರುಗಲಿರುವ ಕೂರ್ಮಗಡದ  ನರಸಿಂಹ ದೇವರ ಜಾತ್ರೆಯನ್ನು ಕೋವಿಡ್-೧೯ ಹಿನ್ನಲೆಯಲ್ಲಿ ಸರಳವಾಗಿ ಕೇವಲ ಧಾರ್ಮಿಕ ವಿಧಿವಿಧಾನಗಳನ್ನು ಮಾತ್ರ ಅನುಸರಿಸಲು ಸೂಚಿಸಲಾಗಿದ್ದು,  ಪ್ರಸ್ತುತ ವರ್ಷ ಪೂಜಾ ಕಾರ್ಯಕ್ರಮಗಳಿಗೆ ತೆರಳುವ ಭಕ್ತರು ಜಿಲ್ಲಾಡಳಿತ ವಿಧಿಸಿರುವ  ನಿಯಮ, ಷರತ್ತುಗಳನ್ನು ಪಾಲಿಸಬೇಕೆಂದು ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿರಾಯಕೊಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಕೆ ಹೊತ್ತ ಮೀನುಗಾರರು ಮಾತ್ರ ಕೂರ್ಮಗಡ ನಡುಗಡ್ಡೆಗೆ ಮೀನುಗಾರಿಕಾಇ ಲಾಖೆಯು ಅನುಮತಿಸಿದ ಪರ್ಷಿಯನ್ ಬೋಟ್‌ಗಳಲ್ಲಿ ತೆರಳಲು ಅವಕಾಶ ಇರುತ್ತದೆ. ಅರ್ಹರು ತಮ್ಮ ಹೆಸರುಗಳನ್ನು ಜ.೧೪ರೊಳಗಾಗಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡವರಿಗೆ ತಹಶೀಲ್ದಾರ ಕಚೇರಿಯಿಂದ ಪಾಸ್ ಹಂಚಿಕೆ ಮಾಡಲಾಗುವುದು. ೧೫ವರ್ಷ ಕೆಳಗಿನ ಮತ್ತು ೬೦ವರ್ಷ ಮೇಲ್ಪಟ್ಟವರಿಗೆ ಪೂಜಾ ಕಾರ್ಯಗಳಿಗೆ ನಡುಗಡ್ಡೆಗೆ ತೆರಳಲು ಅವಕಾಶವಿರುವುದಿಲ್ಲಾ. ಕೋವಿಡ್ ೧೯ ಲಕ್ಷಣಗಳಿರುವವರಿಗೂ ಸಹ ಕುರ್ಮಗಡಕ್ಕೆ ತೆರಳುವ ಅವಕಾಶ ನಿಷೇಧಿಸಲಾಗಿದೆ. ಅಲ್ಲಿತೆರಳುವವರು ಕಡ್ಡಾಯವಾಗಿ ೨ಡೋಸ್ ಕೋವಿಡ್ ೧೯ ಲಸಿಕೆ ಪಡೆದಿರತಕ್ಕದ್ದು. ಹೊರಜಿಲ್ಲೆ, ರಾಜ್ಯದವರಿಗೆ ಪೂಜೆಗೆ ತೆರಳಲು ಅವಕಾಶವಿಲ್ಲ. ಹರಕೆ ಹೊತ್ತವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!