ವಿವಾದಗಳಲ್ಲಿ ಸರ್ಕಾರದ ಪಾತ್ರವಿಲ್ಲ, ಸಮಾಜ ಎಚ್ಚೆತ್ತು ಪ್ರತಿಕ್ರಿಯಿಸುತ್ತಿರುವ ರೀತಿ ಇದು- ಸಚಿವ ಕೋಟ ಶ್ರೀನಿವಾಸ ಪೂಜಾರಿ

 

ಹೊಸ ದಿಗಂತ ವರದಿ ಮಂಗಳೂರು

“ರಾಜ್ಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಕೆಲವೊಂದು ಜಾಗೃತಿಗಳು ನಡೆಯುತ್ತಿದೆ. ಲವ್ ಜಿಹಾದ್ ಮುಂತಾದ ಅನಾಹುತಗಳಿಗೆ ಈಗ ಪ್ರತಿರೋಧ ವ್ಯಕ್ತವಾಗುತ್ತಿದೆ. ವಿವಾದಗಳು ಜನಜಾಗೃತಿಯ ಭಾಗವೇ ಹೊರತು ಸರ್ಕಾರ ಅದರಲ್ಲಿ ಭಾಗಿಯಿಲ್ಲ” ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಹಿಂದೂಯೇತರರಿಗೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅಂಗಡಿ ವ್ಯಾಪಾರಕ್ಕೆ ‌ನೀಡಿದ್ರೆ ಇ.ಒ ಸಸ್ಪೆಂಡ್ ಆದೇಶ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ನಿಯಮಗಳನ್ನು ಹಿಂದಿನ ಸರ್ಕಾರ ಜಾರಿಗೆ ತಂದಿದೆ. ಯಾವುದೇ ತಾರತಮ್ಯ ಇಲ್ಲದೆ ಕಾನೂನು ಪಾಲಿಸೋದು ಅನಿವಾರ್ಯ. ಮುಖ್ಯಮಂತ್ರಿಗಳು ಈಗಾಗಲೇ ಇದನ್ನು ‌ಸ್ಪಷ್ಟಪಡಿಸಿದ್ದಾರೆ. ಜಾತಿ‌ ಧರ್ಮ ವರ್ಗ‌ ನಡುವೆ ತಾರತಮ್ಯ ಇಲ್ಲ. ತಾರತಮ್ಯ ಇಲ್ಲದ ಪರಿಸ್ಥಿತಿ ನಿರ್ಮಾಣ ಸರ್ಕಾರದ ಜವಾಬ್ದಾರಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!