ಕೋಟಿ ಕೋಟಿ ಕೊಟ್ಟರು ಬ್ಯಾಟಿಂಗ್‌ನಲ್ಲಿ ಫೇಲ್: ನಿರಾಸೆಯಲ್ಲಿ ಹೈದರಾಬಾದ್‌ ತಂಡದ ಒಡತಿ ಕಾವ್ಯ ಮಾರನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಕ್ನೋ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಸೋಲನ್ನು ಅನುಭವಿಸಿದ್ದು, ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ ಗೆ ಬೇಸರ ತರಿಸಿದೆ.

ಕೇವಲ121 ಅತ್ಯಲ್ಪ ರನ್‌ ಗಳಿಸಿದ್ದ ಹೈದರಾಬಾದ್‌ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಹಾಗೂ ಬೌಲರ್‌ಗಳ ಕಳಪೆ ಪ್ರರ್ಶನದಿಂದ 2ನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು.

ಪಂದ್ಯದಲ್ಲಿ ಲಕ್ನೋ ಚೇಸಿಂಗ್‌ ಆರಂಭಿಸುತ್ತಿದ್ದಂತೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಹೈದರಾಬಾದ್‌ ಪವರ್‌ ಪ್ಲೇ ನಂತರ ರನ್‌ ಬಿಟ್ಟುಕೊಟ್ಟಿತು. ಕೇಲ್‌ ಮೇಯರ್ಸ್‌ 13 ರನ್‌ಗಳಿಗೆ ಔಟಾಗುತ್ತಿದ್ದಂತೆ ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ (Kavya Maran) ಹುಚ್ಚೆದ್ದು ಕುಣಿದಿದ್ದರು. ಆದ್ರೆತಂಡ ಸೋಲಿನತ್ತ ಮುಖಮಾಡಿತ್ತಿದ್ದಂತೆ ನಿರಾಸೆ ಅನುಭವಿಸಿದರು. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬಿಕರಿ ಮಾಡಿದ ಹೈದರಾಬಾದ್‌ ತಂಡದ ಆಟಗಾರರು ಕಳೆದ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ.

ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹ್ಯಾರಿ ಬ್ರೂಕ್‌ (Harry Brook) ಹೈದರಾಬಾದ್‌ ತಂಡ 13.25 ಕೋಟಿ ರೂ.ಗೆ ಖರೀದಿಸಿತ್ತು. ಅದೇ ರೀತಿ ರಣಜಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಕರ್ನಾಟಕ ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನ 8.25 ಕೋಟಿ ರೂ. ನೀಡಿ ಖರೀದಿಸಿದೆ. ಟೀಂ ಇಂಡಿಯಾ ಆಟಗಾರರಾದ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನ ಕ್ರಮವಾಗಿ 8.50 ಕೋಟಿ ರೂ., 8.75 ಕೋಟಿ ರೂ. ನೀಡಿ ಖರೀದಿಸಿದೆ. ಆದ್ರೆ ಇವರು ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿದ್ದು, ಮಾಲೀಕರೂ ನಿರಾಸೆ ಹೊಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!