ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬ್ರೆಜಿಲ್‌ನಲ್ಲಿ ಕೋವಿಡ್-19 ಭಾರತಕ್ಕಿಂತಲೂ ಮಾರಣಾಂತಿಕ: ಸಾವಿನ ಸಂಖ್ಯೆ ದುಪ್ಪಟ್ಟು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಭುಗಿಲೆದ್ದು ಕಾಡಲಾರಂಭಿಸಿದೆ. ಭಾರತ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಬ್ರೆಜಿಲನ್ನು ಹಿಂದಿಕ್ಕಿದೆ. ಆದರೆ ಅಚ್ಚರಿ ಎಂದರೆ ಸೋಂಕು ಪ್ರಕರಣಗಳು ಉಭಯ ದೇಶಗಳಲ್ಲಿ ಒಂದೇ ರೀತಿ ಕಂಡುಬಂದರೂ ಈ ಲ್ಯಾಟಿನ್ ಅಮೆರಿಕನ್ ದೇಶವಾದ ಬ್ರೆಜಿಲ್‌ನಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಉಭಯ ದೇಶಗಳಲ್ಲಿ ಸುಮಾರಾಗಿ ೧೪ ಮಿಲಿಯ ಪ್ರಕರಣಗಳು ದಾಖಲಾಗಿದೆ.ಆದರೆ ಸಾವಿನ ಪ್ರಮಾಣದಿಂದಾಗಿ ಬ್ರೆಜಿಲ್ ತತ್ತರಿಸಿದೆ . ಈಗಾಗಲೇ ೨೧.೪ಕೋಟಿ ಜನಸಂಖ್ಯೆ ಹೊಂದಿರುವ ಬ್ರೆಜಿಲ್‌ನಲ್ಲಿ ೩,೬೧,೮೦೦ಜನರು ಕೋವಿಡ್-೧೯ಕ್ಕೆ ಬಲಿಯಾಗಿದ್ದಾರೆ. ಇದು ೧೪೦ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಭವಿಸಿದ್ದಕ್ಕಿಂತ ದುಪ್ಪಟ್ಟಾಗಿದೆ.
ಬ್ರೆಜಿಲ್‌ನಲ್ಲಿ ಕಳೆದವಾರ ದಿನವಹಿ ಸಾವಿನ ಪ್ರಮಾಣ ಒಮ್ಮೆಲೆ ೪೦೦೦ಕ್ಕೇರಿತು.ಅದರಲ್ಲೂ ದೊಡ್ಡ ಪ್ರಮಾಣದ ಯುವವರ್ಗ ಸಾವಿಗೀಡಾದವರಲ್ಲಿ ಸೇರಿರುವುದು ಆಘಾತಕ್ಕೆ ಕಾರಣವಾಗಿದೆ.ಭಾರತದಲ್ಲಿ ಸಾವಿನ ಪ್ರಮಾಣ ೧೦೦೦ದ ಆಸುಪಾಸಿನಲ್ಲಿದ್ದು, ಸಾವಿನ ಪ್ರಮಾಣವನ್ನು ತಗ್ಗಿಸಲು ಸರಕಾರ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಅಂಕಿ-ಅಂಶಗಳು ಹೇಳುವಂತೆ,ಸಾವಿನ ಪ್ರಮಾಣ ಭಾರತದಲ್ಲಿ ೧.೨ಆಗಿದ್ದರೆ ಬ್ರೆಜಿಲ್‌ನಲ್ಲಿದು ೨.೬ ಆಗಿದೆ.
ಭಾರತದಲ್ಲೀಗ ೧೧೪ಮಿ.ಲಸಿಕೆ ಡೋಸ್‌ಗಳನ್ನು ಹಾಕಲಾಗಿದ್ದರೆ, ಬ್ರೆಜಿಲ್ ೩೨ಮಿ.ಡೋಸ್‌ಗಳನ್ನು ಮಾತ್ರ ಹಾಕಲು ಸಾಧ್ಯವಾಗಿದೆ.ಇದೇ ವೇಳೆ ಬ್ರೆಜಿಲ್‌ನ ಶೇ.೮೭ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, ಭಾರತದಲ್ಲಿ ಮೂರನೇ ಎರಡರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಹೆಚ್ಚು ವಿಶಾಲ ಅವಕಾಶ, ಶುದ್ಧ ಗಾಳಿ, ಜನರಲ್ಲಿ ರೋಗನಿರೋಧಕ ಶಕ್ತಿಯಂತಹ ಅಂಶಗಳು ಗಮನಾರ್ಹ ಎಂಬುದು ಮಿಚಿಗನ್ ವಿವಿಯ ಮುಖರ್ಜಿ ಅವರು ಹೇಳುತ್ತಾರೆ.
ಬ್ರೆಜಿಲ್‌ನಲ್ಲಿ ಲಾಕ್‌ಡೌನ್‌ನಂತಹ ಕ್ರಮ ಸೇರಿ ಕೊರೋನಾ ವಿರುದ್ಧದ ಕ್ರಮಗಳ ಅನುಷ್ಠಾನಕ್ಕೆ ಸಮರ್ಥ ರಾಜಕೀಯ ನಾಯಕತ್ವದ ಕೊರತೆ ಇರುವುದನ್ನು ತಜ್ಞರು ಬೊಟ್ಟು ಮಾಡುತ್ತಾರೆ. ಆದರೆ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿ ಆರೋಗ್ಯ ಮೂಲಸೌಕರ್ಯಗಳನ್ನು ಸಮರ್ಥ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಮೂಲಕ ಸವಾಲನ್ನು ಎದುರಿಸಲು ಸಾಧ್ಯವಾಗಿದೆ.ಕೊರೋನಾ ಬಂದಾಗ ಭಾರತದಲ್ಲಿ ಪರೀಕ್ಷಾ ಕೇಂದ್ರಗಳು,ಪಿಪಿಇ ಕಿಟ್,ಆಸ್ಪತ್ರೆ ಬೆಡ್, ವೆಂಟಿಲೇಟರ್ ಕೊರತೆಯಂತಹ ಸಮಸ್ಯೆಗಳು ಭೀಕರವಾಗಿದ್ದವು. ಆದರೆ ಕೆಲವೇ ತಿಂಗಳುಗಳಲ್ಲಿ ಭಾರತ ಈ ಕೊರತೆಗಳನ್ನು ಮೆಟ್ಟಿ ನಿಂತು ಈ ಅಗತ್ಯ ಸಲಕರಣೆಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತ್ತು.ಆಡಳಿತ,ಭಾರತೀಯ ಆಸ್ಪತ್ರೆಗಳು, ಕೊರೋನಾ ವಾರಿಯರ್ಸ್‌ಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿತ್ತು. ಭಾರತ ತನ್ನ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಶಕ್ತವಾಗುವಂತಾಗಿತ್ತು ಎಂಬುದಾಗಿ ಬಹುದೊಡ್ಡ ಆಸ್ಪತ್ರೆಗಳ ಸರಣಿ ಸಮೂಹದ ಪ್ರಮುಖರೊಬ್ಬರು ಬೊಟ್ಟು ಮಾಡುತ್ತಾರೆ . ವಿಶ್ವದ ಎರಡನೇ ಅತ್ಯಕ ಜನಸಂಖ್ಯೆ ಹೊಂದಿರುವ ಮತ್ತು ಅಕ ಜನಸಾಂಧ್ರತೆ ಹೊಂದಿರುವ ಭಾರತ ಲಾಕ್‌ಡೌನ್‌ನಂತಹ ಕ್ರಮದ ಮೂಲಕ ಭಾರೀ ಪ್ರಮಾಣದ ಸಾವುನೋವುಗಳನ್ನು ತಪ್ಪಿಸಿತು ಎಂಬುದನ್ನು ಕೆನಡಾದ ಸಂಶೋಧಕರೊಬ್ಬರು ಉಲ್ಲೇಖಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss