Saturday, August 13, 2022

Latest Posts

ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ -19 ಲಸಿಕಾ ಮಹಾಮೇಳ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಿರಿಯಡ್ಕಕದ ಪ್ರಾಥಮಿಕ ಆರೋಗ್ಯ ಕೇಂದ್ರ ಪೆರ್ಣಂಕಿಲ, ಗ್ರಾಮ ಪಂಚಾಯತ್ ಕೊಡಿಬೆಟ್ಟು, ಗೆಳೆಯರ ಬಳಗ ಕಾಜಾರಗುತ್ತು ನೇತೃತ್ವದಲ್ಲಿ ಕೋವಿಡ್ -19 ಲಸಿಕಾ ಮಹಾಮೇಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತುವಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೊಡಿಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಆಶಾ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಕೊಡಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷ ಸದಾನಂದ ಪ್ರಭು, ಉದ್ಯಮಿ ಅನಿಲ್ ಶೆಟ್ಟಿ ಮಾಂಬೆಟ್ಟು, ಕೊಡಿಬೆಟ್ಟು ಗ್ರಾ.ಪಂ.ಸದಸ್ಯ ಸಂದೀಪ್ ಮಡಿವಾಳ, ಅಂಜಾರು ಗ್ರಾ.ಪಂ.ಸದಸ್ಯರಾದ ವಿನಯ್, ವಸಂತಿ ಎಸ್.ಪ್ರಭು, ಸತ್ಯಾನಂದ ನಾಯಕ್, ಸ‌.ಹಿ‌.ಪ್ರಾ.ಶಾಲೆ ಕಾಜಾರಗುತ್ತುವಿನ ಶಿಕ್ಷಕಿ ಗಾಯತ್ರಿ, ಗೆಳೆಯರ ಬಳಗದ ನಿತೀಶ್ ಶೆಟ್ಟಿ, ಸುಧೀರ್ ಶೆಟ್ಟಿ, ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ದಾಕ್ಷಾಯಿಣಿ ಸ್ವಾಗತಿಸಿ, ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss