Sunday, August 14, 2022

Latest Posts

ಬೆಂಗಳೂರು ಎಫ್‌ಸಿ ಯಿಂದ ಕೋವಿಡ್-19 ನಿಯಮ ಉಲ್ಲಂಘನೆ: ದೇಶ ಬಿಟ್ಟು ತೊರೆಯುವಂತೆ ಮಾಲ್ಡೀವ್ಸ್‌ ಕ್ರೀಡಾ ಸಚಿವ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸುನಿಲ್ ಛೇಟ್ರಿ ನಾಯಕತ್ವ ವಹಿಸಿರುವ ಬೆಂಗಳೂರು ಎಫ್‌ಸಿ ಫುಟ್ಬಾಲ್​ ತಂಡವು ಎಎಫ್‌ಸಿ ಕಪ್ ಪ್ಲೇಆಫ್ ಟೈನಲ್ಲಿ ಕ್ಲಬ್ ಈಗಲ್ಸ್ ವಿರುದ್ಧದ ಪಂದ್ಯಕ್ಕಾಗಿ ಐಎಸ್‌ಎಲ್ ಕ್ಲಬ್ ಶುಕ್ರವಾರ ಮಾಲ್ಡೀವ್ಸ್‌ಗೆ ತೆರಳಿತು.

ಮೇ 11 ರಂದು ಎರಡು ಕ್ಲಬ್‌ಗಳ ನಡುವೆ ಪ್ಲೇ-ಆಫ್ ಪಂದ್ಯ ನಡೆಯಬೇಕಿತ್ತು. ಆದರೆ, ಈಗ ಬೆಂಗಳೂರು ತಂಡದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಆತಿಥೇಯ ದೇಶದ ಕ್ರೀಡಾ ಸಚಿವರು ಬೆಂಗಳೂರು ಎಫ್‌ಸಿ ತಂಡವನ್ನು ದೇಶ ತೊರೆಯುವಂತೆ ಕೇಳಿಕೊಂಡಿದ್ದು, ಬಿಎಫ್‌ಸಿ ಮೇಲೆ ಕೇಳಿಬಂದಿರುವ ಈ ಆರೋಪಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ ಆದರೆ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ಇದನ್ನು ಸ್ವೀಕಾರಾರ್ಹವಲ್ಲದ ವರ್ತನೆ ಎಂದು ಹೇಳಿದ್ದಾರೆ.

ಎಎಫ್‌ಸಿ ಕಪ್‌ನ ಆರಂಭಿಕ ಸುತ್ತಿನ -2 ಪಂದ್ಯದಲ್ಲಿ ಸುನೀಲ್ ಛೇಟ್ರಿ ನೇತೃತ್ವದ ತಂಡ ನೇಪಾಳದ ಕ್ಲಬ್ ತ್ರಿಭುವನ್ ಆರ್ಮಿ ಎಫ್‌ಸಿಯನ್ನು 5-0 ಗೋಲುಗಳಿಂದ ಸೋಲಿಸಿತು. ನಂತರ ಈಗಲ್ಸ್ ಮತ್ತು ಅಬಹಾನಿ ಲಿಮಿಟೆಡ್ ಢಾಕಾ ತಂಡಗಳಲ್ಲಿ ಗೆದ್ದ ತಂಡದೊಂದಿಗೆ ಪಂದ್ಯ ಆಡಬೇಕಿತ್ತು. ಆದರೆ ದೇಶದಲ್ಲಿ ಕೊರೋನಾ ದಾಳಿಯಿಂದಾಗಿ ಬಾಂಗ್ಲಾದೇಶದ ಕ್ಲಬ್, ಎಎಫ್‌ಸಿ ಕಪ್ ಅರ್ಹತಾ ಪಂದ್ಯಗಳಿಂದ ಹಿಂದೆ ಸರಿಯಿತು, ನಂತರ ಈಗಲ್ಸ್ ಪ್ಲೇಆಫ್ ಪಂದ್ಯವನ್ನು ತಲುಪಿತು.

ಭಾರತದ ನಾಯಕ ಸುನಿಲ್ ಛೇಟ್ರಿ ನೇತೃತ್ವದ ಬೆಂಗಳೂರು ತಂಡ ಶುಕ್ರವಾರ ಮಾಲ್ಡೀವ್ಸ್ ತಲುಪಿದೆ. ಆದರೆ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ಬೆಂಗಳೂರು ಎಫ್‌ಸಿ ತಂಡ ಕೊರೋನಾ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಆದರಿಂದ ನಾವು ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಮಾಲ್ಡೀವ್ಸ್ ಫುಟ್ಬಾಲ್ ಸಂಘಕ್ಕೆ ತಿಳಿಸಿದ್ದೇವೆ ಮತ್ತು ಬೆಂಗಳೂರು ಎಫ್‌ಸಿ ನಿರ್ಗಮನಕ್ಕೆ ತಯಾರಿ ನಡೆಸುವಂತೆ ಕೇಳಿಕೊಂಡಿದ್ದೇವೆ. ಗುಂಪು ಹಂತವನ್ನು ಮುಂದೂಡಲು ನಾವು ಮಾಲ್ಡೀವ್ಸ್ ಫುಟ್ಬಾಲ್ ಅಸೋಸಿಯೇಷನ್ ​​ಮೂಲಕ ಎಎಫ್‌ಸಿಯೊಂದಿಗೆ ಮಾತನಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss