Tuesday, August 16, 2022

Latest Posts

ಸೆ. 22: ಕೊಡಗಿನಲ್ಲಿ ಕೋವಿಡ್ ಲಸಿಕಾ ಮಹಾ ಮೇಳ

ಹೊಸ ದಿಗಂತ ವರದಿ, ಮಡಿಕೇರಿ:

ಸೆಪ್ಟೆಂಬರ್ 22 ರಂದು ಕೋವಿಡ್ ಲಸಿಕಾ ಅಭಿಯಾನ ನಡೆಯಲಿದ್ದು, ಮಡಿಕೇರಿ ನಗರದ ಕಾವೇರಿ ಓಂಕಾರ ಸದನದಲ್ಲಿ 450 ಮಂದಿಗೆ, ಡಿವಿಎಸ್ 50 ಮಂದಿಗೆ, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ 200, ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರ ಅಯ್ಯಂಗೇರಿ ಉಪ ವಿಭಾಗದಲ್ಲಿ 200, ನೆಲಜಿ ಉಪ ವಿಭಾಗ ಎಮ್ಮೆಮಾಡು ಗ್ರ್ರಾಮದಲ್ಲಿ 100 ಮಂದಿಗೆ, ಕರಿಕೆ ಉಪ ವಿಭಾಗದಲ್ಲಿ 50, ಚೇರಂಬಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಕ್ಕಬ್ಬೆ ಉಪ ವಿಭಾಗದಲ್ಲಿ 150 ಮಂದಿಗೆ, ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಪೋಕ್ಲು ಬಿ. ಉಪ ವಿಭಾಗದಲ್ಲಿ 100 ಮಂದಿಗೆ ಲಸಿಕೆ ನೀಡಲಾಗುತ್ತದೆ.
ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಕತ್ತೂರು ಉಪ ವಿಭಾದದಲ್ಲಿ 100, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮದೆನಾಡು ಉಪ ವಿಭಾದದಲ್ಲಿ 100 ಬಾಲಂಬಿ ಉಪ ವಿಭಾದದಲ್ಲಿ 50, ಕುದ್ರೆಪಾಯ ಉಪ ವಿಭಾದದಲ್ಲಿ 50 ಮಂದಿಗೆ, ಪೆರಾಜೆ ಉಪ ವಿಭಾದದಲ್ಲಿ 100 ಮಂದಿಗೆ, ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ ಲಸಿಕೆ ನೀಡಲಾಗುತ್ತದೆ.
ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮದಲಾಪುರ ಉಪವಿಭಾಗ 300 ಮಂದಿಗೆ, ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 400 ಮಂದಿಗೆ, ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಡ್ಡೆಹೊಸೂರು ಉಪವಿಭಾಗದಲ್ಲಿ 200 ಮಂದಿಗೆ, ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ, ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ 300 ಮಂದಿಗೆ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ 500 ಮಂದಿಗೆ, ಸೂರ್ಲಬಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ 100 ಮಂದಿಗೆ ಲಸಿಕೆ ಹಾಕಲಾಗುತ್ತದೆ.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಕಲಾಭವನದಲ್ಲಿ 500, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ 250 ಮಂದಿಗೆ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚನ್ನಂಗೊಲ್ಲಿ ಗ್ರಾಮದ ಮಾಯಮುಡಿ ಉಪ ವಿಭಾಗದಲ್ಲಿ 150 ಮಂದಿಗೆ, ಮಾರಿಯಮ್ಮ ಕಾಲೋನಿ ಕೋಣನಕಟ್ಟೆ ಉಪ ವಿಭಾಗದಲ್ಲಿ 100 ಮಂದಿಗೆ, ನಿಟ್ಟೂರು ಉಪ ವಿಭಾಗದಲ್ಲಿ 100 ಮಂದಿಗೆ, ವಡ್ಡರಮಾಡು ಕೊಂಕನಕಟ್ಟೆ ಉಪ ವಿಭಾಗದಲ್ಲಿ 100 ಮಂದಿಗೆ, ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿಗೆ, ಟಿ ಶೆಟ್ಟಿಗೇರಿ ಉಪವಿಭಾಗದಲ್ಲಿ 150 ಮಂದಿಗೆ, ಚೆನ್ನಯ್ಯನಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸೂರು ಉಪವಿಭಾಗದಲ್ಲಿ 150 ಮಂದಿಗೆ, ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ಪೊನ್ನಂಪೇಟೆ ಉಪವಿಭಾಗದಲ್ಲಿ 100 ಮಂದಿಗೆ, ಹಳ್ಳಿಗಟ್ಟು ಉಪ ವಿಭಾಗದಲ್ಲಿ 100 ಮಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.
ಕಾಕೋಟುಪರಂಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಕೆದಮುಳ್ಳೂರು ಉಪವಿಭಾಗದಲ್ಲಿ 100 ಮಂದಿಗೆ, ಕನ್ನಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ದೇವನಗಿರಿ ಉಪವಿಭಾಗದಲ್ಲಿ 200 ಮಂದಿಗೆ, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿಗೆ, ಕೇಂಬುಕೊಲ್ಲಿ ಉಪವಿಭಾಗದಲ್ಲಿ 150, ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿ ಶೆಟ್ಟಿಗೇರಿ ಉಪವಿಭಾಗದಲ್ಲಿ 200 ಮಂದಿಗೆ, ಬೇಟೋಳಿ ಉಪವಿಭಾಗದಲ್ಲಿ 200 ಮಂದಿಗೆ, ಹೆಗ್ಗಳ ಉಪವಿಭಾಗದಲ್ಲಿ 200 ಮಂದಿಗೆ, ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಮರಗೋಳಿ ಸಿದ್ದಾಪುರ ಉಪವಿಭಾಗದಲ್ಲಿ 100 ಮಂದಿಗೆ, ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಮಂದಿಗೆ, ರೇಷ್ಮೆ ಹಾಡಿ ಹೆಬ್ಬಾಲೆ ಉಪ ವಿಭಾಗ 100 ಮಂದಿಗೆ, ನಾಯಿಮನೆ ಕಾಲೋನಿ ತಿತಮತಿ ‘ಬಿ’ ಉಪ ವಿಭಾಗ 100 ಮಂದಿಗೆ, ದೇವರಪುರ ಪಂಚಾಯಿತಿ ಉಪವಿಭಾಗದಲ್ಲಿ 50 ಮಂದಿಗೆ, ಹರಿಶ್ಚಂದ್ರಪುರ ಅತ್ತೂರು ಉಪವಿಭಾಗದಲ್ಲಿ 100 ಮಂದಿಗೆ, ದೇವಮಚ್ಚಿ ಗ್ರಾಮದ ಮತ್ತಿಗೋಡು ಉಪವಿಭಾಗದಲ್ಲಿ 100 ಮಂದಿಗೆ, ಗೋಣಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300 ಮಂದಿಗೆ, ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ 400 ಮಂದಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುವುದು ಹಾಗೂ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಹಾಗೂ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!