ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಶಿವಮೊಗ್ಗ:
ಕೋವಿಡ್ ಸಂಕಷ್ಟಕ್ಕೆ ಒಳಗಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಲು ಶಿವಮೊಗ್ಗ ಜಿಲ್ಲೆಗೆ 21 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಟ ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 1,07,286 ಮಂದಿ ನೊಂದಾಯಿತ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಅದರಲ್ಲಿ 72,000 ಜನರಿಗೆ ಆಹಾರ ಕಿಟ್ ಮತ್ತು ಸಹಾಯಧನ ಒದಗಿಸಲು 21 ಕೋಟಿ ರೂ. ಬಿಡುಗಡೆ ಆಗಿದೆ. ಕಾರ್ಮಿಕ ಇಲಾಖೆ ವತಿಯಿಂದ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ನಮ್ಮ ಪ್ರಕೋಷ್ಟ ಕೂಡಾ ನೊಂದಾಯಿತ ಕಾರ್ಮಿಕರಿಗೆ ಸೌಲಭ್ಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ ಎಂದರು.
ಕಟ್ಟಡ ಕಾರ್ಮಿಕರಿಗೆ ತಲಾ 3000 ರೂ.. ಹಾಗೂ ಇನ್ನುಳಿದ ಅಸಂಘಟಿತ ಕಾರ್ಮಿಕರಿಗೆ 2000 ರೂ. ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 716 ಅಗಸರಿಗೆ 14.32 ಲಕ್ಷ ರೂ., 1315 ಕ್ಷೌರಿಕರಿಗೆ 26.30 ಲಕ್ಷ ರೂ., 184 ಮಂದಿ ಅಕ್ಕಸಾಲಿಗರಿಗೆ 3.68 ಲಕ್ಷ ರೂ., 22 ಮಂದಿ ಕುಂಬಾರರಿಗೆ 44,0000 ರೂ., 139 ಮಂದಿ ಚಿಂದಿ ಆಯುವವರಿಗೆ 2.78 ಲಕ್ಷ ರೂ., ಮನೆ ಕೆಲಸ ಮಾಡುವ 223 ಮಂದಿಗೆ 4.46 ಲಕ್ಷ ರೂ., 1507 ಮಂದಿ ಟೈಲರ್ಗಳಿಗೆ 30.14 ಲಕ್ಷ ರೂ., 181 ಮೆಕ್ಯಾನಿಕ್ಗಳಿಗೆ 3.62 ಲಕ್ಷ ರೂ., 416 ಹಮಾಲಿ ಕೆಲಸ ಮಾಡುವವರಿಗೆ 8.30 ಲಕ್ಷ ರೂ., ನೀಡಲಾಗಿದೆ. ಈವರೆಗೆ ಒಟ್ಟು 94.18 ಲಕ್ಷ ರೂ.ಗಳನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.
ಪ್ರಮುಖರಾದ ಜಿಲ್ಲಾ ಸಂಚಾಲಕ ಪೆರುಮಾಳ್, ಪಾಪಣ್ಣ, ಗೋಪಾಲ, ಸಾರಂಗ ಸುದ್ದಿಗೋಷ್ಟಿಯಲ್ಲಿದ್ದರು.