Wednesday, August 10, 2022

Latest Posts

ನೇಪಾಳದ ಪ್ರಧಾನಿಯಾಗಿ ಮತ್ತೆ ಕೆ.ಪಿ.ಶರ್ಮಾ ಒಲಿ ಪ್ರಮಾಣವಚನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ನೇಪಾಳದ ಪ್ರಧಾನಿಯಾಗಿ ಮತ್ತೆ ಕೆ.ಪಿ.ಶರ್ಮಾ ಒಲಿ ಅವರು ಶುಕ್ರವಾರ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ಶೀತಲ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ವಿದ್ಯಾದೇವಿ ಅವರು ಒಲಿ ಅವರಿಗೆ ಪ್ರಮಾಣವಚನ ಬೋಧಿಸಿದರು.
ಸೋಮವಾರವಷ್ಟೇ ಜನಪ್ರತಿನಿಧಿ ಸಭೆಯಲ್ಲಿ ನಡೆದ ವಿಶ್ವಾಸಮತದಲ್ಲಿ ಸಿಪಿನ್‌-ಯುಎಂಎಲ್‌ ಪಕ್ಷದ ಅಧ್ಯಕ್ಷ ಒಲಿ ಅವರು ಸೋಲು ಅನುಭವಿಸಿದ್ದರು. ಆದರೆ ಸಂಸತ್ತಿನಲ್ಲಿ ಬಹುಮತ ಗಳಿಸುವಷ್ಟು ಸ್ಥಾನಗಳನ್ನು ಪಡೆಯಲು ಇತರ ವಿರೋಧ ಪಕ್ಷಗಳು ವಿಫಲವಾದ ಕಾರಣ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಒಲಿ ಅವರನ್ನೇ ಪ್ರಧಾನಿಯನ್ನಾಗಿ ಗುರುವಾರ ರಾತ್ರಿ ಮರು ನೇಮಕ ಮಾಡಿದ್ದರು.
ಇದೀಗ ಒಲಿ ಅವರು 30 ದಿನದೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕಾಗುತ್ತದೆ. ಆ ಪ್ರಯತ್ನ ವಿಫಲವಾದಲ್ಲಿ, ಸಂವಿಧಾನದ 76(5) ವಿಧಿಯಡಿಯಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss