Wednesday, August 10, 2022

Latest Posts

ಲಸಿಕೆ ನೀಡಿಕೆಯಲ್ಲಿ ಕೆ.ಆರ್.ಕ್ಷೇತ್ರ ರಾಜ್ಯದಲ್ಲೇ ಪ್ರಥಮ: ಶಾಸಕ ಎಸ್.ಎ.ರಾಮದಾಸ್

ಹೊಸದಿಗಂತ ವರದಿ, ಮೈಸೂರು:

ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ ಶೇ 123ರಷ್ಟು ವ್ಯಾಕ್ಸಿನ್‌ನ್ನು ನೀಡಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಕೆ.ಆರ್ ಕ್ಷೇತ್ರದ 100% ಜನ ಹಾಗೂ 23% ಬೇರೆ ಬೇರೆ ಕಡೆಯಿಂದ ಬಂದoತಹ ಜನರಿಗೆ ಲಸಿಕೆ ನೀಡಿದ್ದೇವೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರದ ಪೈಕಿ. ಕೆ.ಆರ್. ಕ್ಷೇತ್ರವೇ ಲಸಿಕೆ ನೀಡಿಕೆಯಲ್ಲಿ ನಂ 1 ಸ್ಥಾನದಲ್ಲಿದೆ. ಕೆ.ಆರ್ ಕ್ಷೇತ್ರದಲ್ಲಿ ಬೂತ್, ಬೂತ್ ನಲ್ಲಿ ಲಸಿಕೆ ನೀಡಿದ್ದೇವೆ. ಹಾಗಾಗಿ ಕೆ.ಆರ್ ಕ್ಷೇತ್ರ ಲಸಿಕಾಕರಣದಲ್ಲಿ ರಾಜ್ಯಕ್ಕೆ ಪ್ರಥಮ ಎಂದು ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಘೋಷಣೆ ಮಾಡಿದ್ದಾರೆ.
ಕೆ.ಆರ್ ಕ್ಷೇತ್ರದಲ್ಲಿ ಇದು ಸಾಕಾರವಾಗಿದ್ದು ನಮ್ಮ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸಂಘಟನೆಯಲ್ಲಿರುವ ವಾರ್ಡ್, ಬೂತ್ ಅಧ್ಯಕ್ಷರುಗಳ ಶ್ರಮದಿಂದ ಎಂದು ಹೇಳಿದ್ದಾರೆ.
ವಿಶ್ವದಲ್ಲಿ ಬಹಳಷ್ಟು ವಿಚಾರದಲ್ಲಿ ಭಾರತ ಪ್ರಥಮದಲ್ಲಿದೆ. ಕೊರೋನಾ ಇಡೀ ಪ್ರಪಂಚವನ್ನು ಕಷ್ಟಕ್ಕೆ ಸಿಲುಕಿಸಿತ್ತು. ಅಭಿವೃದ್ಧಿ ಹೊಂದಿದ ರಾಷ್ಟçಗಳೇ ಕೋವಿಡ್ ನಿಂದ ತತ್ತರಿಸಿ ಹೋಗಿದ್ದವು. ಪುಟ್ಟ ಪುಟ್ಟ ರಾಷ್ಟçಗಳಲ್ಲೂ ಕೂಡಾ ಕೋವಿಡ್ ದೊಡ್ಡ ಸಮಸ್ಯೆಯನ್ನೇ ಮಾಡಿತ್ತು. ಇದೀಗ ಭಾರತ 100 ಕೋಟಿ ಲಸಿಕಾ ಡೋಸ್‌ನ್ನು ನೀಡಿ ಒಂದು ದಾಖಲೆ ನಿರ್ಮಿಸಿದೆ. ಇದು ಸಾಕಾರವಾಗಬೇಕಾದರೆ ಆರೋಗ್ಯ ಕಾರ್ಯಕರ್ತರುಗಳು ಎಷ್ಟು ಮುಖ್ಯವೋ ಅದೇ ರೀತಿ ಸಮರ್ಥ ನಾಯಕತ್ವವೂ ಮುಖ್ಯವಾದದ್ದು. ಈ ದೇಶದಲ್ಲಿ ಯೋಜಿತ ರೀತಿಯಲ್ಲಿ ವ್ಯಾಕ್ಸಿನ್ ಅನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss