ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಕೃಷ್ಣನಗರ್ ಫಿನಾಲೆ ತಲುಪುವ ಮೂಲಕ ಚಿನ್ನದ ಪದಕ ಗಳಿಸುವ ಭರವಸೆ ಮೂಡಿಸಿದ್ದಾರೆ.
ಭಾರತೀಯ ಪ್ಯಾರಾ ಶಟ್ಲರ್ ಕೃಷ್ಣನಗರ್ ಬ್ರಿಟನ್ ನ ಕ್ರಿಸ್ಟೆನ್ ಕೂಂಬ್ಸ್ ಅವರನ್ನು 2-0 ಅಂತರದಲ್ಲಿ ಸೋಲಿಸಿ ಫೈನಲ್ಸ್ ತಲುಪಿದ್ದಾರೆ.
ಬ್ಯಾಡ್ಮಿಂಟನ್ ನಲ್ಲಿ ಈಗಾಗಲೇ ಪ್ರಮೋದ್ ಭಗತ್ ಹಾಗೂ ಸುಹಾಸ್ ಎಲ್. ಯತಿರಾಜ್ ಫಿನಾಲೆ ಹಂತ ತಲುಪಿದ್ದು, ಕನಿಷ್ಠ ಬೆಳ್ಳಿಪದಕಕ್ಕೆ ಮುತ್ತಿಡಲಿದ್ದಾರೆ.