Wednesday, August 10, 2022

Latest Posts

ಪರ್ಯಾಯ ಸಿದ್ಧತೆಯಲ್ಲಿ ಉಡುಪಿ ಕೃಷ್ಣಾಪುರ ಮಠ: ಕಟ್ಟಿಗೆ ಮುಹೂರ್ತ ಸಂಪನ್ನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಉಡುಪಿ:

ಮುಂದಿನ ಜನವರಿ 18ರಂದು ನಡೆಯಲಿರುವ ಕೃಷ್ಣಾಪುರ ಮಠ ಪರ್ಯಾಯ ಪೂರ್ವ ವಿಧಿಗಳಲ್ಲಿ ಮೂರನೆಯದಾದ ಕಟ್ಟಿಗೆ ಮುಹೂರ್ತ ಭಾನುವಾರ ಬೆಳಗ್ಗೆ 8.45ರ ಸಿಂಹ ಲಗ್ನ ಮುಹೂರ್ತದಲ್ಲಿ ಜರಗಿತು. ಶ್ರೀಕೃಷ್ಣಮಠದ ಸಮೀಪದ ಮಧ್ವಸರೋವರದ ಈಶಾನ್ಯ ಪಾರ್ಶ್ವದಲ್ಲಿ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಅದಕ್ಕೂ ಮುನ್ನ ಕೃಷ್ಣಾಪುರ ಮಠದ ಉಪಾಸ್ಯದೇವರಾದ ಶ್ರೀಕಾಳೀಯಮರ್ಧನ ಕೃಷ್ಣ ಹಾಗೂ ಶ್ರೀನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಲಾಯಿತು. ಬಳಿಕ ಕಟ್ಟಿಗೆಯನ್ನು ತಲೆಹೊರೆಯಲ್ಲಿ ಹೊತ್ತುಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರ ದರ್ಶನದ ಬಳಿಕ ಮಧ್ವ ಸರೋವರದ ಈಶಾನ್ಯ ಭಾಗದಲ್ಲಿ ಕಟ್ಟಿಗೆಗಳನ್ನು ಇರಿಸಿ ಪೂಜೆ ಸಲ್ಲಿಸಲಾಯಿತು. ಅಷ್ಟಮಠಗಳ ವಿದ್ವಾಂಸರಿಗೆ ನವಗ್ರಹ ದಾನ ನೀಡಲಾಯಿತು. ಧಾರ್ಮಿಕ ವಿಧಿಗಳನ್ನು ಕೆ. ಶ್ರೀನಿವಾಸ ಉಪಾಧ್ಯಾಯ ನಡೆಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ, ಕಟ್ಟಿಗೆ ಮುಹೂರ್ತ ಪರ್ಯಾಯ ಕಾಲದ ವ್ಯಾಪ್ತೋಪಾಸನೆಗೆ ಪೂರಕ. ಶ್ರೀಕೃಷ್ಣ ಮಠದಲ್ಲಿ ಭಾವಿಸಮೀರ ವಾದಿರಾಜರು ಹಾಕಿಕೊಟ್ಟ ಪೂಜಾ ಕ್ರಮವೇ ವಿಶಿಷ್ಟವಾಗಿದೆ. ದೇವರನ್ನು ಗರ್ಭಗೃಹದಲ್ಲಿ ಮಾತ್ರವಲ್ಲದೆ, ಪ್ರತೀ ಅಧಿಷ್ಠಾನಗಳಲ್ಲೂ ಆರಾಧಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಳ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಆಸ್ರಣ್ಣ, ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ. ಭುವನಾಭಿರಾಮ ಉಡುಪ, ಭಾಸ್ಕರ ರಾವ್ ಕಿದಿಯೂರು, ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಕೃಷ್ಣ ಆಚಾರ್ಯ, ಹರಿದಾಸ ಉಪಾಧ್ಯಾಯ ಮೊದಲಾದವರಿದ್ದರು. ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss