ನನಗೆ ರೊಮ್ಯಾಂಟಿಕ್ ಮತ್ತು ಆಕ್ಷನ್ ಎರಡೂ ಒಂದೇ ಎಂದ ಕನ್ನಡದ ಬೆಡಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಪ್ಪೆನ ಚಿತ್ರದ ಮೂಲಕ ನಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಕೃತಿ ಶೆಟ್ಟಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್.‌  ರೊಮ್ಯಾಂಟಿಕ್ ದೃಶ್ಯಗಳಿಗೂ ಓಕೆ ಹೇಳುತ್ತಿರುವ ಬೇಬಮ್ಮಂಗೆ ಹೆಚ್ಚಿನ ಆಫರ್ ಗಳು ಬರುತ್ತಿವೆ. ಉಪ್ಪೇನ, ಶ್ಯಾಮ್ ಸಿಂಗರೈ, ಬಂಗಾರರಾಜು ಸತತ ಮೂರು ಚಿತ್ರಗಳೊಂದಿಗೆ ಹ್ಯಾಟ್ರಿಕ್ ಹಿಟ್ ಗಳಿಸಿ ಇದೀಗ ರಾಮ್‌ ಜೊತೆ ವಾರಿಯರ್ ಚಿತ್ರದಲ್ಲಿ ನಟಿಸಿದ್ದಾರೆ.  ಈ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಮಾತನಾಡುತ್ತಾ ರೊಮ್ಯಾಂಟಿಕ್‌ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ ಕೃತಿ ಶೆಟ್ಟಿ ಉಪ್ಪೇನಾ ಮತ್ತು ಶ್ಯಾಮ್ ಸಿಂಗರಾಯ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಮತ್ತು ಲಿಪ್ ಲಾಕ್‌ ಸೀನ್‌ ಮಾಡಿದ್ದಾರೆ. ಸಿನಿಮಾ ಅಂತ ಬಂದಾಗ ಮುಂದೆ ಭವಿಷ್ಯದಲ್ಲಿ ಅಂತಹ ಸೀನ್‌ ಮಾಡುವುದಾಗಿ ಹೇಳಿದ್ದಾರೆ. ”ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವವರನ್ನು ತುಂಬಾ ಜನ ಕೀಳಾಗಿ ಕಾಣುತ್ತಾರೆ. ಆದರೆ ನಾಯಕ ಮತ್ತು ನಾಯಕಿಯ ನಡುವಿನ ಬಾಂಧವ್ಯವನ್ನು ತೋರಿಸಲು, ಪ್ರಣಯ ದೃಶ್ಯಗಳು ಪರಿಪೂರ್ಣವಾಗಿರಬೇಕು. ಕಥೆಗೆ ಅಂತಹ ರೊಮ್ಯಾಂಟಿಕ್ ದೃಶ್ಯಗಳು ಬೇಕಾದರೆ ಲಿಪ್‌ಲಾಕ್ ಮತ್ತು ಬೋಲ್ಡ್ ದೃಶ್ಯಗಳಿಗೆ ಓಕೆ ಹೇಳುತ್ತೇನೆ. ನನ್ನ ಪ್ರಕಾರ ಇದೆಲ್ಲವೂ ನಟನೆಯ ಭಾಗ. ಸಾಕಷ್ಟು ಸಾಹಸ ದೃಶ್ಯಗಳು ಮತ್ತು ಬೋಲ್ಡ್ ದೃಶ್ಯಗಳೂ ಇವೆ. ನಾನು ಎರಡನ್ನೂ ವಿಭಿನ್ನವಾಗಿ ನೋಡುವುದಿಲ್ಲ, ಆಕ್ಷನ್‌ ಮತ್ತು ರೊಮ್ಯಾಂಟಿಕ್‌ ಎರಡೂ ಒಂದೇ”ಎಂದು ಕೃತಿ ಶೆಟ್ಟಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!