spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಲಿವುಡ್‌ನಲ್ಲೇ ಅತಿ ದುಬಾರಿ ಕಾರು ಖರೀದಿಸಿದ ನಟಿ ಕೃತಿ ಸೆನೋನ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್ ತಾರೆಯರು ಆಗಾಗ ತಮ್ಮ ಡ್ರೀಂ ಕಾರ್ ಕೊಂಡು ಜಗತ್ತಿಗೆ ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಾರೆ.
ಇದೇ ಸಾಲಿಗೆ ನಟಿ ಕೃತಿ ಸೆನೋನ್ ಕೂಡ ಸೇರ್ಪಡೆಯಾಗಿದ್ದಾರೆ. ಬಾಲಿವುಡ್‌ನಲ್ಲೇ ಅತಿ ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ ಕೃತಿ.
2.43 ಕೋಟಿ ಮೌಲ್ಯದ ಮೆರ್ಸಿಡಿಸ್ ಮೇಬ್ಯಾಕ್ ಜಿಎಲ್‌ಎ 600 ಕಾರನ್ನು ಕೃತಿ ಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೃತಿ ಸೆನೋನ್ ಅಭಿನಯದ ಮಿಮಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿಯಾಗಿ ಯಶಸ್ವಿ ಕಂಡಿತ್ತು. ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡು, ಮತ್ತೆ ತೂಕ ಇಳಿಸಿರೋ ಕೃತಿಯ ಫಿಟ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಬಾಲಿವುಡ್‌ನ ಕೆಲವೇ ಮಂದಿ ಬಳಿ ಇರೋ ಈ ಕಾರನ್ನು ಇದೀಗ ಕೃತಿ ಖರೀದಿ ಮಾಡಿದ್ದಾರೆ. ಅತಿ ದುಬಾರಿ ಕಾರು ಖರೀದಿಸಿದ ಬಾಲಿವುಡ್‌ನ ಮೊದಲ ನಟಿ ಕೃತಿ ಆಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss