ಹೊಸ ದಿಗಂತ ವರದಿ, ಜಮಖಂಡಿ:
ವಿಜಯಪುರದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಯಾರೋ ಕಿಡಿಗೇಡಿಗಳು ಎಸೆದ ಕಲ್ಲಿನಿಂದ ಗಂಬೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಜಮಖಂಡಿ ತಾಲ್ಲೂಕಿನ ಕವಟಗಿ ಗ್ರಾಮದ ಬಳಿ ಕೆಎ -29, ಎಫ್ – 1275 ನಂಬರಿನ ಪತ್ತರಗಾ ಜಮಖಂಡಿ ಬಸ್ಗೆ ಕಲ್ಲು ಎಸೆಯಲಾಗಿದೆ.ಆದರೆ ಬಸ್ ದಲ್ಲಿ ಚಾಲಕನಿಗೆ ಕಲ್ಲಿನೇಟು ಬಿದ್ದಿದ್ದರಿಂದ ಬಸ್ ಚಾಲಕ ನಬೀರವುಸಲ್ ಅವಟಿ ಗಂಭೀರ ವಾಗಿ ಗಾಯಗೊಂಡ ಪರಿಣಾಮ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಸಾವನ್ನಪ್ಪಿದ್ದಾರೆ.
1984 ರಲ್ಲಿ ಸೇವೆಗೆ ಸೇರಿದ್ದು, 30 ವರ್ಷ ಸೇವೆ ಮಾಡಿದ್ದು ಇನ್ನೊಂದು ವರ್ಷ ಸರ್ಕಾರಿ ಸೇವೆ ಉಳಿದಿರುವಾಗ ಈ ದುರ್ಘಟನೆ ನಡೆದಿದೆ.ಗುರುವಾರವೂ ಸೇವೆ ಮಾಡಿದ್ದ ಬಸ್ ಚಾಲಕ ಶುಕ್ರವಾರ ಮತ್ತೆ ಸೇವೆಗೆ ಹಾಜರಾಗಿ ವಿಜಯಪುರ ದಿಂದ ವಾಪಸ್ ಬರುವಾಗ ನನ್ನ ಪತಿ ಸಾವು ಕಂಡರು. ಇದಕ್ಕೆ ಯಾರು ಹೊಣೆ ಎಂದು ಮೃತ ಚಾಲಕನ ಪತ್ನಿ ನೋವು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಲೋಕೇಶ ಜಗಲಾಸಾರ್ , ಜಮಖಂಡಿ ಗ್ರಾಮೀಣ ಠಾಣೆಯ ಪಿಎಸ್ ಐ ಬಸವರಾಜ ಭೇಟಿನೀಡಿದ್ದಾರೆ.
ಇದೇ ವೇಳೆ ಜಮಖಂಡಿ ತಾಲ್ಲೂಕಿನ ಆಲಗೂರ ಬಳಿಯೂ ಮತ್ತೊಂದು ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆಂದು ವರದಿಯಾಗಿದೆ.