ಹಾಸನಾಂಬೆ ಹುಂಡಿಗೆ ಕುಬೇರನ ಕೃಪೆ: 14 ದಿನಗಳ ಉತ್ಸವದಲ್ಲಿ 29.55 ಕೋಟಿ ರೂ. ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಹಾಸನದ ಅಧಿದೇವತೆ ಹಾಸನಾಂಬೆ ದರುಶನೋತ್ಸವ ಮುಕ್ತಾಯಗೊಂಡ ಬೆನ್ನಲ್ಲೇ ದೇವಾಲಯದ ಆದಾಯದ ಲೆಕ್ಕಾಚಾರ ಹೊರಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಭಕ್ತರು ದೇವಿಗೆ ಸಲ್ಲಿಸಿದ ಕಾಣಿಕೆ ಹಾಗೂ ಟಿಕೆಟ್, ಲಡ್ಡು ಪ್ರಸಾದ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 29.55 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವಾಲಯದ ಆದಾಯದಲ್ಲಿ ಸುಮಾರು 4 ಕೋಟಿ ಹೆಚ್ಚಳವಾಗಿರುವುದು ವಿಶೇಷ. ದರ್ಶನೋತ್ಸವದ ಬಳಿಕ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 3.71 ಕೋಟಿ ನಗದು ಸಂಗ್ರಹವಾಗಿದೆ. … Continue reading ಹಾಸನಾಂಬೆ ಹುಂಡಿಗೆ ಕುಬೇರನ ಕೃಪೆ: 14 ದಿನಗಳ ಉತ್ಸವದಲ್ಲಿ 29.55 ಕೋಟಿ ರೂ. ಆದಾಯ