ಜಗತ್ತಿನ ಅಗ್ರಮಾನ್ಯ ನಾಯಕರನ್ನೂ ನಿಬ್ಬೆರಗಾಗಿಸಲು ಸಜ್ಜಾಗಿದೆ ಕುಡ್ಲದ ನೃತ್ಯ ತಂಡ!

ಹೊಸದಿಗಂತ ವರದಿ, ಮಂಗಳೂರು:

ದೇಶದ ಅಗ್ರಮಾನ್ಯ ನಾಯಕರ ಮುಂದೆ ಮಂಗಳೂರಿನ ಕುವರಿಯನ್ನೊಳಗೊಂಡ ತಂಡ ನೃತ್ಯ ಪ್ರದರ್ಶನ ನೀಡಲು ಸಜ್ಜಾಗಿದೆ.

ಇದೇ ಮೇ ೨೩ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಭೇಟಿ ನೀಡಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಜೈ ಕಾಪಿಕಾಡ್ ನಿವಾಸಿ ಅನಿಶಾ ಪೂಜಾರಿ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಅನಿಶಾ ಅವರನ್ನೊಳಗೊಂಡ ‘ನಾಟ್ಯೋಕ್ತಿ’ ನೃತ್ಯ ತಂಡವು ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!