Thursday, August 18, 2022

Latest Posts

ಕುಕ್ಕೆ ಸುಬ್ರಹ್ಮಣ್ಯ ದೇವಳದ ನೌಕರರ 6ನೇ ವೇತನ ಮಂಜೂರಾತಿ ಕಡತಕ್ಕೆ ಸಹಿ

ದಿಗಂತ ವರದಿ ಸುಬ್ರಹ್ಮಣ್ಯ:

ಕುಕ್ಕೆ ಸುಬ್ರಹ್ಮಣ್ಯ ದೇವಳದ ನೌಕರರ 6ನೇ ವೇತನ ಮಂಜೂರಾತಿ ಕಡತಕ್ಕೆ ಗುರುವಾರ ಸಹಿ ಹಾಕಲಾಗಿದೆ.
ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರ ನೇತೃತ್ವದ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಹಿಂದು ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿ, ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 284ನೌಕರರಿಗೆ 6ನೇ ವೇತನ ನೀಡಲು ಮುತುವರ್ಜಿ ವಹಿಸಿ ಈ ಬಗ್ಗೆ ನಿರ್ಣಯಿಸುವಂತೆ ವಿನಂತಿಸಿದರು.
ಸಚಿವ ಅಂಗಾರ ಅವರ ಮನವಿಗೆ ಸಮ್ಮತಿ ಸೂಚಿಸಿದ ಸಚಿವೆ ಜೊಲ್ಲೆ, ನೌಕರರ 6 ನೇ ವೇತನ ಮಂಜೂರಾತಿ ಕಡತಕ್ಕೆ ಸಹಿ ಮಾಡಿದರು. ಸೆಪ್ಟೆಂಬರ್ ತಿಂಗಳಾತ್ಯದಲ್ಲಿ ಕುಕ್ಕೆಯಲ್ಲಿ ನಡೆಯುವ ಮಾಸ್ಟರ್‌ಪ್ಲಾನ್ ಸಭೆಯ ಸಂದರ್ಭ ಇಬ್ಬರೂ ಸಚಿವರು ನೌಕರರಿಗೆ6 ನೇ ವೇತನ ಮಂಜೂರಾತಿ ಪ್ರತಿಯನ್ನು ವಿತರಿಸಲು ನಿರ್ಣಯಿಸಲಾಯಿತು.
122 ಸಿಬ್ಬಂದಿಗೆ ಖಾಯಂಮಾತಿ:
ತಾತ್ಕಾಲಿಕ ನೆಲೆಯಲ್ಲಿದ್ದ ಕುಕ್ಕೆ ದೇವಳದ 122 ಮಂದಿ ನೌಕರರಿಗೆ ಸಚಿವ ಅಂಗಾರ ಅವರ ಮುತುವರ್ಜಿಯಿಂದ ಈಗಾಗಲೇ ಖಾಯಂ ನೇಮಕಾತಿಗೊಳಿಸಲಾಗಿದೆ. ಈ ಖಾಯಂಮಾತಿಯ ಆದೇಶವನ್ನು ಕೂಡಾ ಮಾಸ್ಟರ್‌ಪ್ಲಾನ್ ಸಭೆಯಲ್ಲಿ ನೌಕರರಿಗೆ ಸಚಿವದ್ವಯರು ವಿತರಿಸಲಿದ್ದಾರೆ. ಈ ಮೂಲಕ ಉಸ್ತುವಾರಿ ಸಚಿವರ ಮತ್ತು ಆಡಳಿತ ಮಂಡಳಿಯ ಪ್ರಯತ್ನದ ಫಲವಾಗಿ ಕುಕ್ಕೆ ದೇವಳದ 406ಸಿಬ್ಬಂದಿಯ 4 ವರ್ಷಗಳ ಕನಸು ನನಸಾದಂತಾಗಿದೆ.
ಈ ಸಂದರ್ಭ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಜಿಲ್ಲಾ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!