Tuesday, July 5, 2022

Latest Posts

ದಲಿತರ-ಸವಣೀ೯ಯರ ಮಧ್ಯೆ ವಿವಾದ ಸೃಷ್ಟಿಸಲು ಕುಮಾರಸ್ವಾಮಿ ಯತ್ನ: ಆಂದೋಲಾ ಶ್ರೀ ಕಿಡಿ

ಹೊಸದಿಗಂತ ವರದಿ, ಕಲಬುರಗಿ.:

ರಾಜ್ಯದಲ್ಲಿ ದಲಿತರ ಮತ್ತು ಸವಣೀ೯ಯರ ಮಧ್ಯೆ ದೊಡ್ಡ ವಿವಾದ ಸೃಷ್ಟಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಕರುಣೇಶ್ವರ ಮಠದ ಆಂದೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಷ್ಟು ಜನ ದಲಿತ ಮತ್ತು ಹಿಂದೂಳಿದ ವಗ೯ದವರನ್ನು ನಿಮ್ಮ ಮನೆಗೆ ಮತ್ತು ದೇವರ ಕೋಣೆಗೆ ಕರೆಸಿಕೊಂಡಿದ್ದಿರಿ ? ಬಹಿರಂಗ ಪಡಿಸಿ ಎಂದು ಸವಾಲೆಸೆದರು.
ಸಕಾ೯ರವನ್ನು ಟೀಕಿಸುವ ಭರದಲ್ಲಿ ಮಠ-ಮಾನ್ಯಗಳನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದು,ಇದು ಸರಿಯಲ್ಲ ಎಂದರು.

ನೀವು ನಿಮ್ಮ ಮನೆಗಳನ್ನು ಮತ್ತು ರೆಸಾರ್ಟ್ ಗಳನ್ನು ದಲಿತರಿಂದ ಕಟ್ಟಿಸಿಕೊಂಡಿದ್ದಿರಿ. ದೇವಸ್ಥಾನ ನಾವು ಕಟ್ಟಿದ್ದೇವೆ ಎಂದು ದಲಿತರ್ಯಾರು ದೇವಸ್ಥಾನಕ್ಕೆ ಪ್ರವೇಶ ಮಾಡುತ್ತೇವೆ ಎಂದು ಬಂದಿಲ್ಲ ಎಂದರು.

ನೀವು ಮುಖ್ಯಮಂತ್ರಿ ಇದ್ದಾಗ ಮುಜರಾಯಿ ಇಲಾಖೆಯಿಂದ ದಲಿತರಿಗೆ ಪ್ರವೇಶ ಕೊಟ್ಟಿದ್ದಿರಿ ಎಂದರು.

ಹಲಾಲ್ ಅಂಗಡಿಗೆ ಹೋಗಿ ಮಾಂಸ ಖರೀದಿ ಮಾಡಬೇಡಿ.

ಇನ್ನೂ ಇದೆ ಸಂದರ್ಭದಲ್ಲಿ ಹಲಾಲ್ ವಿರುದ್ಧ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಹೋರಾಟ ಸ್ವಾಗತಾರ್ಹ. ಹಿಂದುಗಳು ಯಾವುದೇ ಕಾರಣಕ್ಕೂ ಮುಸ್ಲಿಂ ರ ಹಲಾಲ್ ಅಂಗಡಿಗೆ ಹೋಗಿ ಮಾಂಸ ಖರೀದಿಸಬಾರದು ಎಂದರು.

ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರೇ, ಹಿಂದೂ ವಿರೋದಿಗಳ ಶಕ್ತಿ ಕೈ ಬಲಪಡಿಸಿದಂತಾಗುತ್ತದೆ. ಹಿಂದೂಗಳಿಗೆ ದ್ರೋಸ ಬಗೆದಂತಾಗುತ್ತದೆ ಎಂದರು.

ಮುಸ್ಲಿಂ ವ್ಯಕ್ತಿ ಚೂರಿ ಹಾಕಿದ ಮಾಂಸ , ಮುಸ್ಲಿಂ ರಿಗೆ ಮಾತ್ರ ಶ್ರೇಷ್ಟವಾಗಿರುತದೆ.ಅದು ಹಿಂದೂಗಳಿಗೆ ಎಂಜಲಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss