Monday, July 4, 2022

Latest Posts

ಕುಮಾರಸ್ವಾಮಿಗೆ ಆರ್ ಎಸ್ ಎಸ್ ಬಗ್ಗೆ ಗಂಧಗಾಳಿ ಗೊತ್ತಿಲ್ಲ: ಸಚಿವ ಆರ್. ಅಶೋಕ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕುಮಾರಸ್ವಾಮಿಗೆ ಆರ್ ಎಸ್ ಎಸ್ ಗಂಧಗಾಳಿ ಗೊತ್ತಿಲ್ಲ. ಯಾವುದೋ‌ ಒಂದು ಪುಸ್ತಕ ಓದಿ ಅದೇ ಸತ್ಯ ಅಂದ್ರೆ ಕುರುಡ ಆನೆಯ ಬಾಲ ಮುಟ್ಟಿ ಅದೇ ಆನೆ ಅಂದುಕೊಂಡಂತೆ ಕುಮಾರಸ್ವಾಮಿ ಅಂದುಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಈಗ ಕಾಂಗ್ರೆಸ್ ಜೆಡಿಎಸ್ ನಡುವೆ ಅಲ್ಪ ಸಂಖ್ಯಾತರ ಮತಗಳಿಗೆ‌ ಪೈಪೋಟಿ‌ ಶುರುವಾಗಿದೆ. ಕಾಂಗ್ರೆಸ್ ಒಡೆದು ಮನೆ. ಕೇಂದ್ರದಲ್ಲಿ‌ ಕಾಂಗ್ರೆಸ್ ಕಚ್ಚಾಟ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ಕೂಡ ಹೆಚ್ಚಾಗಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟ ಆಗೋದು ಗ್ಯಾರಂಟಿ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.
ಬೊಮ್ಮಾಯಿ ಅವರೇ ಒಂದೂವರೆ ವರ್ಷ ಮುಖ್ಯಮಂತ್ರಿ ಅಗಿರುತ್ತಾರೆ. ಅವರ ನೇತೃತ್ವದಲ್ಲಿಯೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಅಶೋಕ್ ಸ್ಪಷ್ಟನೆ ನೀಡಿದರು‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss