ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ

ಹೊಸದಿಗಂತ ವರದಿ ರಾಮನಗರ: ಕುಮಾರಸ್ವಾಮಿ ಮೊದಲು ಊಸರವಳ್ಳಿ ರಾಜಕಾರಣ ಮಾಡುವುದನ್ನು ಬಿಡಬೇಕು ಮತ್ತು ವೈಯಕ್ತಿಕ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಚಿವ ಎಚ್.ಸಿ ಬಾಲಕೃಷ್ಣ ತಿಳಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮೃದು ಧೋರಣೆ ತೋರುತ್ತಿರುವ ವಿಚಾರದ ಕುರಿತು ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತ್ಯ ಮಾಧ್ಯಮಗಳ ಮುಂದೆ ತೋರಿಸುತ್ತಿರುವ ಈ ಪ್ರಕರಣಗಳು ಕೊನೆಗೆ ಅವರ ಬುಡಕ್ಕೇ ಬರಲಿವೆ. ಸ್ವಲ್ಪ ದಿನ ಕಾದು ನೋಡಿ, ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು. … Continue reading ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ, ವೈಯಕ್ತಿಕ ಟೀಕೆ ನಿಲ್ಲಿಸಲಿ: ಸಚಿವ ಬಾಲಕೃಷ್ಣ