Monday, July 4, 2022

Latest Posts

ದಕ್ಷಿಣ ಕೊಡಗಿನ ಕುಂದ ಬೆಟ್ಟದ ದೇವಾಲಯಕ್ಕೆ ಕಿಡಿಗೇಡಿಗಳಿಂದ ಹಾನಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಡಿಕೇರಿ:

ದಕ್ಷಿಣ ಕೊಡಗಿನ ಕುಂದ ಬೆಟ್ಟದ ತುದಿಯಲ್ಲಿರುವ ಬೊಟ್ಲಪ್ಪ (ಬೆಟ್ಟದ ಮಹಾದೇವ) ದೇವಸ್ಥಾನಕ್ಕೆ ಯಾವುದೋ ಕಿಡಿಗೇಡಿಗಳು ಹಾನಿಯುಂಟುಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಈ ಹಿಂದೆ ಪಾಡವರು ಅಜ್ಞಾತ ವಾಸದಲ್ಲಿದ್ದಾಗ ಪಾಂಡವರೇ ಕಲ್ಲಿನಲ್ಲಿ ನಿರ್ಮಿಸಿದ್ದೆಂದು ಹೇಳಲಾಗುವ ಬೊಟ್ಲಪ್ಪ ದೇಗುಲದ ಮೇಲ್ಛಾವಣಿಯ ನಾಲ್ಕು ತುದಿಗಳಲ್ಲಿ ಅಳವಡಿಸಲಾದ ಒಂದು ಬಸವ ವಿಗ್ರಹಕ್ಕೆ ಹಾನಿಯುಂಟು ಮಾಡಿರುವ ದುಷ್ಕರ್ಮಿಗಳು ಬಸವ ವಿಗ್ರಹದ ತಲೆಯನ್ನು ಕೆಳಗೆ ಉರುಳಿಸಿದ್ದಾರೆ.
ಊರಿನ ವ್ಯಕ್ತಿಯೊಬ್ಬರು ಬೆಟ್ಟದ ದೇವಸ್ಥಾನಕ್ಕೆ ಎಂದಿನಂತೆ ತೆರಳಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತಕ್ಕಮುಖ್ಯಸ್ಥರು ಹಾಗೂ ಊರಿನವರು ಸೇರಿ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದೆ. ಈ ಸಂದರ್ಭ ಸ್ಥಳದಲ್ಲಿ ಕತ್ತಿಯೊಂದು ದೊರೆತಿದ್ದು, ತನಿಖೆ ಮುಂದುವರಿದಿದೆ.
ಪುರಾಣ ಪ್ರಸಿದ್ಧ ಇತಿಹಾಸವಿರುವ ಈ ಕುಂದಾ ಬೆಟ್ಟಕ್ಕೆ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಕೂಡ ಮೋಜು ಮಸ್ತಿಗೆಂದು ಆಗಾಗ್ಗೆ ಭೇಟಿ ನೀಡುತ್ತಿದ್ದು, ಅತಿರೇಕದ ವರ್ತನೆಯಿಂದ ಹಲವಾರು ಬಾರಿ ಊರಿನವರಿಂದ ಗೂಸ ತಿಂದಿರುವ ಪ್ರಕರಣಗಳೂ ನಡೆದಿವೆ.
ಭಾನುವಾರ ಕೂಡಾ ಯುವಕರ ತಂಡ ಮದ್ಯ ಮಾಂಸದೊಂದಿಗೆ ಬೆಟ್ಟವೇರಲು ಆಗಮಿಸಿದಾಗ ಸ್ಥಳೀಯರು ಧರ್ಮದೇಟು ನೀಡಿ ಎಚ್ಚರಿಕೆಯ ಬುದ್ಧಿ ಮಾತು ಹೇಳಿ ವಾಪಾಸು ಕಳುಹಿಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡಿಗೆ ಸೇರಿದ ಈ ದೇವಸ್ಥಾನದಲ್ಲಿ ಕಾವೇರಿ ತಿರ್ಥೋದ್ಭವ ಸಂದರ್ಭ ಪ್ರತಿವರ್ಷ ಕೊಡಗಿನ ಮೊದಲ ಬೇಡು ಹಬ್ಬ ನಡೆಯುವುದು ಇಲ್ಲಿನ ವಿಶೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss