Monday, October 2, 2023

Latest Posts

ಮಳೆ ತಂದ ಸೌಭಾಗ್ಯ: ಬಾಳಲ್ಲಿ ಬೆಳಕು, ಕೋಟ್ಯಾಧಿಪತಿಯಾದ ರೈತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತುಂತುರು ಮಳೆಯಾದರೆ, ಆಂಧ್ರಪ್ರದೇಶದ ರಾಯಲಸೀಮೆಯಲ್ಲಿ ರತ್ನಗಳು ಕಾಣಿಸಿಕೊಳ್ಳುತ್ತವೆಯಂತೆ. ಕಾರ್ಮಿಕರು ಕೂಡ ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಅದರಲ್ಲೂ ಮೊದಲ ತುಂತುರು ಮಳೆಯಾದರೆ ಕರ್ನೂಲು ಜಿಲ್ಲೆಯಲ್ಲಿ ವಜ್ರಗಳು ಬೀಳುತ್ತವೆ, ಹೀಗೊಂದು ಜನರಲ್ಲಿ ನಂಬಿಕೆಯಿದೆ. ತಮ್ಮ ಅದೃಷ್ಟ ಪರೀಕ್ಷಿಸಲು…ಅನೇಕ ಜನರು ಈ ಮೊದಲ ತುಂತುರು ಮಳೆಗಾಗಿ ಕಣ್ಣುಗಳನ್ನು ತೆರೆದು ಕಾಯುತ್ತಾರೆ. ಮಳೆ ಬಂದಾಗ ವಜ್ರದ ಬೇಟೆಗಿಳಿಯುತ್ತಾರೆ. ಬೆಳ್ಳಂಬೆಳಗ್ಗೆ ವಜ್ರ ಬೇಟೆಗೆ ಶುರುವಿಟ್ಟು..ರಾತ್ರಿ ಆಗುವವರೆಗೂ ಕೈಯಿಂದ ಜಾಲಾಡುತ್ತಾರೆ. ಸಣ್ಣ ಹೊಳೆಯುವ ಕಲ್ಲು ಕಂಡರೂ ವಜ್ರವೇ ಎಂದು ಆಶಿಸಿ ಕೈಗೆ ತೆಗೆದುಕೊಳ್ಳುತ್ತಾರೆ.

ಅದೇ ಭರವಸೆಯೊಂದಿಗೆ ಕರ್ನೂಲು ಜಿಲ್ಲೆಯಲ್ಲಿ ವಜ್ರದ ಬೇಟೆ ಶುರುವಾಗಿದೆ. ಅದರಂತೆ ರೈತನಿಗೆ ವಜ್ರ ಸಿಕ್ಕಿದೆ, ಇನ್ನೇನು ಅವನ ಸಂತೋಷಕ್ಕೆ ಪಾರವೇ ಇಲ್ಲ. ಮಡ್ಡಿಕೇರ ಮಂಡಲದ ಬಸಿನೆಪಲ್ಲಿ ಗ್ರಾಮದಲ್ಲಿ ರೈತನೊಬ್ಬನಿಗೆ ಅಮೂಲ್ಯ ವಜ್ರ ದಕ್ಕಿಸಿಕೊಂಡಿದ್ದು, ಕೋಟ್ಯಾಧಿಪತಿಯಾಗಿದ್ದಾನೆ.

ವಜ್ರವನ್ನು ಮೂರನೇ ಕಣ್ಣಿಗೆ ತಿಳಿಯುವ ಮೊದಲೇ ಖರೀದಿಸಲಾಯಿತಂತೆ. ವಜ್ರ ಎರಡು ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

ಮೊದಲ ಮಳೆ ಬಿದ್ದ ಕೂಡಲೇ ಕರ್ನೂಲು ಜಿಲ್ಲೆಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲದೆ ಬೆಳಗಾಗುವ ಮೊದಲು ವಜ್ರಗಳನ್ನು ಹುಡುಕಲು ಹೊಲಗಳಿಗೆ ಹೋಗುತ್ತಾರೆ. ರಾಯಲಸೀಮೆಯ ಹಲವು ಜಿಲ್ಲೆಗಳಲ್ಲಿ ಈ ವಜ್ರದ ಬೇಟೆ ಪ್ರತಿ ವರ್ಷ ಮಳೆಗಾಲದ ಆರಂಭದೊಂದಿಗೆ ಪ್ರಾರಂಭವಾಗುತ್ತದೆ. ಕರ್ನೂಲ್ ಜಿಲ್ಲೆಯ ನಿವಾಸಿಗಳು ಮಾತ್ರವಲ್ಲದೆ ಎಲ್ಲೆಡೆಯಿಂದ ಜನರು ಈ ಸ್ಥಳಗಳಿಗೆ ಬರುತ್ತಾರಂತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!