Monday, August 8, 2022

Latest Posts

ಕುಶಾಲನಗರ ಸಮೀಪ ಸರಣಿ ಅಪಘಾತ: ಕಾರು, ಬಸ್ ಗೆ ಡಿಕ್ಕಿ ಹೊಡೆದ ಶೆವರ್ಲೆ ಕಾರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕುಶಾಲನಗರ:

ನಿಯಂತ್ರಣ ತಪ್ಪಿದ ಕಾರೊಂದು‌ ಮುಂಭಾಗಲ್ಲಿದ್ದ ಮತ್ತೊಂದು ಕಾರು ಹಾಗೂ ಸಾರಿಗೆ ಬಸ್ ಗೆ ಡಿಕ್ಕಿಯಾದ ಘಟನೆ ಕುಶಾಲನಗರ ಸಮೀಪದ ಆನೆ ಕಾಡಿನಲ್ಲಿ ನಡೆದಿದೆ.
ಮಡಿಕೇರಿಯಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಾರಿಗೆ ಬಸ್ ಪ್ರಯಾಣಿಕರನ್ನು ಇಳಿಸಲೆಂದು ಆನೆಕಾಡು ಬಳಿ‌ ನಿಲುಗಡೆಗೊಳಿಸಿತ್ತು. ಇದರ ಹಿಂದೆ ಬರುತ್ತಿದ್ದ ಸುಂಟಿಕೊಪ್ಪದ ಅಬ್ದುಲ್ ಸಲಾಂ ಎಂಬವರ ಮಾರುತಿ ಸ್ವಿಫ್ಟ್ ಕಾರು ಮುಂಭಾಗದಲ್ಲಿ ವಾಹನಗಳು
ಆಗಮಿಸುತ್ತಿದ್ದ ಕಾರಣ ಓವರ್ ಟೇಕ್ ಮಾಡದೆ ಬಸ್ ಮುಂದಕ್ಕೆ ಸಾಗುವುದಕ್ಕಾಗಿ ಬಸ್ ಹಿಂದೆ ನಿಲ್ಲಿಸಿದ್ದರು.
ಈ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಶೆವರ್ಲೆ ಕಾರು ಸ್ವಿಫ್ಟ್ ಕಾರಿನ ಹಿಂಬದಿಗೆ ಅಪ್ಪಳಿಸಿ ಅದೇ ವೇಗದಲ್ಲಿ ಬಸ್ ನ ಹಿಂಭಾಗಕ್ಕೆ ಡಿಕ್ಕಿಯಾಗಿ ಹೆದ್ದಾರಿ ಬದಿ ಗುಂಡಿಗೆ ವಾಲಿಕೊಂಡಿದೆ‌.
ಘಟನೆಯಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಅಫ್ಜಲ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಕಳ‌ ಮೂಲದ ಚವರ್ಲೆಟ್ ಕಾರು ಚಾಲಕ ಸುಜಿತ್ ಎಂಬಾತನನ್ನು ವಶಕ್ಕೆ ಪಡೆದ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss