ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ, ಕುಶಾಲನಗರ:
ಹಾಸನ ಹಾಲು ಒಕ್ಕೂಟದ ವತಿಯಿಂದ ಕುಶಾಲನಗರ ಮತ್ತು ಕೂಡಿಗೆ ಹಾಲಿನ ಮಾರಾಟ ಕೇಂದ್ರಗಳಲ್ಲಿ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಉದ್ಘಾಟಿಸಿ, ಈಗಾಗಲೇ ಹಾಸನ ಹಾಲು ಒಕ್ಕೂಟದಿಂದ ವಿವಿಧ ಬಗೆಯ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಅದರಂತೆ ಗ್ರಾಹಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಸಿಹಿ ಉತ್ಸವ ಆ.20 ರಿಂದ 15 ದಿನಗಳವರೆಗೆ ನಡೆಯಲಿದ್ದು, ಇದರ ಅಂಗವಾಗಿ ಡೈರಿಯ ಹಾಲಿನ ಎಲ್ಲಾ ಸಿಹಿ ಉತ್ಪನ್ನಗಳನ್ನು ಶೇಕಡಾ 10 ರಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಎಂದರು.
ಈ ಸಂದರ್ಭ ಹಾಸನ ಹಾಲು ಒಕ್ಕೂಟದ ಹಾಸನ ಡೈರಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಪ್ರಿಯರಂಜನ್ ಅವರು, ಹಾಸನ ಹಾಲು ಒಕ್ಕೂಟದಿಂದ ಉತ್ಪನ್ನವಾಗುವ ಸಿಹಿ ಉತ್ಪನ್ನ ವಸ್ತುಗಳ ಬಗ್ಗೆ ಸಮಗ್ರವಾದ ಮಾಹಿತಿಗಳನ್ನು ನೀಡಿದರು.
ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಕೂಡಿಗೆ ಡೈರಿ ಮಾರಾಟ ವಿಭಾಗದ ಉಪ ವ್ಯವಸ್ಥಾಪಕ ಡಿ .ಎನ್. ಮಲ್ಲೇಶ್ , ಕೂಡಿಗೆ ಡೈರಿ ಮಾರುಕಟ್ಟೆಯ ಅಧೀಕ್ಷಕ ಅಜ್ಜಿಕುಟ್ಟಿರ ಸೋಮಯ್ಯ, ಹಾಲು ಮಾರಾಟ ಮಳಿಗೆಗಳ ಟೆಂಡರ್ ದಾರ ಚಂದ್ರಕಾತ್ ಮತ್ತಿತರು ಇದ್ದರು.